ಅರಣ್ಯದಲ್ಲಿ ಐವರು ಬೇಟೆಗಾರರು ಸೆರೆ : ಕೋವಿ ವಶ

ಕಾಸರಗೋಡು: ರಾಜಪುರದ ಸರಕಾರಿ ಮೀಸಲು ಅರಣ್ಯಕ್ಕೆ  ವನ್ಯ ಮೃಗಗಳ ಬೇಟೆಗಾಗಿ ಬಂದ ಐವರು ಬೇಟೆಗಾರರ ತಂಡವನ್ನು ಅರಣ್ಯಪಾ ಲಕರು ಬಂಧಿಸಿದ್ದಾರೆ. ಕೋಳಿಚ್ಚಾಲ್ ಪುತ್ತನ್‌ಪುರ ಯಿಲ್  ಜಂಟಿಲ್ ಜೋರ್ಜ್ (35), ಪನತ್ತಡಿ ಪುತ್ತನ್ ಪುರಯಿಲ್‌ನ ಜೋಸ್ ಜೋಸೆ ಫ್(56), ಪನತ್ತಡಿ ನಾರಕ್ಕಾಟ್ ವೀಟಿಲ್‌ನ ಸೋನಿ ಥೋಮಸ್ (43), ಕೋಳಿಚ್ಚಾಲ್ ಪುನ್ನತ್ತಾನ ಅಜು ಮ್ಯಾಥ್ಯು (35) ಮತ್ತು ಜೀಪು ಚಾಲಕ ತೃಶೂರು ಕಣ್ಣಾರ ನಿವಾಸಿ  ರಿಚಾರ್ಡ್ ಎಲ್ದೋಸ್ (38) ಎಂಬವರು ಬಂಧಿತರಾದ ವರು. ಇವರ ಕೈವಶವಿದ್ದ  ಬಂದೂಕು,  ಜೀಪನ್ನು ಅರಣ್ಯ ಪಾಲಕರು ವಶಕ್ಕೆ ತೆಗೆದು ಕೊಂಡು ಪ್ರಕರಣ ದಾಖಲಿಸಿ  ತನಿಖೆ ನಡೆಸುತ್ತಿದ್ದಾರೆ.

You cannot copy contents of this page