ಮನೆಯಲ್ಲಿ 6.520 ಕಿ.ಗ್ರಾಂ ಗಾಂಜಾ ಪತ್ತೆ: ಓರ್ವ ಸೆರೆ

ಕಾಸರಗೋಡು: ಅಬಕಾರಿ ತಂಡ ನಿನ್ನೆ ನಡೆಸಿದ ಗುಪ್ತ ಕಾರ್ಯಾಚರಣೆಯಲ್ಲಿ ಮನೆಯಲ್ಲಿ ಬಚ್ಚಿಡಲಾಗಿದ್ದ 6.520 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದೆ. ಹೊಸದುರ್ಗ ತಾಲೂಕಿನ ಉದಿನೂರು ಗ್ರಾಮದ ಮಾಚಿಕ್ಕಾಡ್ ಕೊಕ್ಕಾಕಡವ್ ನಿವಾಸಿ ಸಿ. ಧನಂ ಎಂಬ ಮಹಿಳೆ ಮತ್ತು ಅವರ ಕುಟುಂಬ ವಾಸಿಸುತ್ತಿರುವ ಮನೆಯಿಂದ ಈ ಮಾಲು ಪತ್ತೆಹಚ್ಚಲಾಗಿದೆ.  ಇದಕ್ಕೆ ಸಂಬಂಧಿಸಿ ಉದಿನೂರು ಮಾಚಿಕ್ಕಾಡ್ ಕೊಕ್ಕಾಕಡವಿನ ತುರುತ್ತಿ ಮಠತ್ತಿಲ್ ವೀಟಿಲ್‌ನ ಟಿ.ಆರ್. ಮಣಿ (57) ಎಂಬಾತನನ್ನು ಅಬಕಾರಿ ತಂಡ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ.

ಕಾಸರಗೋಡು ಇ.ಐ. ಆಂಡ್ ಐಬಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಹೊಸದುರ್ಗ ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನ ಕುಮಾರ್ ವಿ.ವಿ.ಯವರ ನೇತೃತ್ವದಲ್ಲಿ ಇ.ಐಆಂಡ್ ಐ.ಬಿಯ ಕಾಸರಗೋಡು ಎಕ್ಸೈಸ್  ಇನ್ಸ್‌ಪೆಕ್ಟರ್, ಸುಬಿನ್‌ರಾಜ್ ಕೆ., ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ., ಪ್ರಿವೆಂಟಿವ್ ಆಫೀಸರ್ ಸಾಜನ್ ಅಪ್ಯಾಲ್ ಮತ್ತು ಇತರ ಅಬಕಾರಿ  ಸಿಬ್ಬಂದಿಗಳಾದ ಸುಮೋದ್ ಕುಮಾರ್ ಎಂ.ವಿ, ಶ್ಯಾಮ್‌ಜಿತ್ ಎಂ, ಪ್ರಶಾಂತ್ ಕುಮಾರ್ ಶುಭಾ ಪಿ. ಮತ್ತು ಸುಧೀರ್ ಕುಮಾರ್, ಎಂಬವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

You cannot copy contents of this page