ಅಸೌಖ್ಯ: ಯುವತಿ ನಿಧನ

ಉಪ್ಪಳ : ಕುಂಬಳೆ ಕಂಚಿಕಟ್ಟೆ ನಿವಾಸಿ ಪ್ರದೀಪ್‌ರ ಪತ್ನಿ ವೈಶಾಲಿ (33) ನಿನ್ನೆ ಮುಂಜಾನೆ ನಿಧನ ಹೊಂದಿದರು. ಅಸೌಖ್ಯ ತಗಲಿ ಬಂದ್ಯೋಡು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ನಿಧನ ಸಂಭವಿಸಿದೆ. ಮೃತರು ತಂದೆ ಪ್ರೇಮ್ ಕುಮಾರ್ ಐಲ (ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ), ತಾಯಿ ಮೋಹಿನಿ, ಸಹೋದರ ವೈಶಾಕ್ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ನಿನ್ನೆ ಸಂಜೆ ಐಲ ಮನೆ ಪರಿಸರದಲ್ಲಿ ನಡೆಯಿತು. ಮನೆಗೆ ಸಂಘ ಪರಿ ವಾರದ ಮುಖಂಡರು, ಕಾರ್ಯ ಕರ್ತರ ಸಹಿತ ನೂರಾರು ಮಂದಿ ಭೇಟಿ ಅಂತಿಮ ನಮನ ಸಲ್ಲಿಸಿದರು.

You cannot copy contents of this page