ಕುಂಬಳೆ: ಕರ್ನಾಟಕ ಮದ್ಯ ಸಹಿತ ಯುವಕ ಸೆರೆಗೀಡಾಗಿದ್ದಾನೆ. ಮಂಗಲ್ಪಾಡಿ ಪ್ರತಾಪನಗರ ನಿವಾಸಿ ಪಿ. ಅಭಿಷೇಕ್ (31) ಸೆರೆಗೀಡಾದ ಯುವಕ. ಮೊನ್ನೆ ಸಂಜೆ ಕುಬಣೂರು ಎಟಿಎಸ್ ಗ್ರೌಂಡ್ ಸಮೀಪ ನಿಂತಿದ್ದ ಅಭಿಷೇಕ್ ನನ್ನು ಕುಂಬಳೆ ಪೊಲೀಸರು ತಪಾಸಣೆ ನಡೆಸಿದಾಗ ಆತನ ಕೈಯಲ್ಲಿ ೧೮೦ ಮಿಲ್ಲಿ ಲೀಟರ್ನ 24 ಟೆಟ್ರಾ ಪ್ಯಾಕೆಟ್ ಕರ್ನಾಟಕ ಮದ್ಯ ಪತ್ತೆಯಾಗಿದೆ. ಈತ ಕರ್ನಾಟಕದಿಂದ ಮದ್ಯ ತಂದು ಮಾರಾಟ ನಡೆಸುವ ತಂಡದ ಸದಸ್ಯನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ಹರೀಂದ್ರನ್, ಸುದೀಶ್ ಎಂಬಿವರಿದ್ದರು.






