ಮಧೂರು: ಆಟೋರಿಕ್ಷಾ ಚಾಲಕ ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮಧೂರು ಬೈನಡ್ಕದ ದಿ| ಕುಂಞಿರಾಮ ಮಣಿಯಾಣಿ -ಸುಶೀಲ ದಂಪತಿ ಪುತ್ರ ಚಂದ್ರಶೇಖರ ಮಣಿಯಾಣಿ (51) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಮನೆ ಪಕ್ಕದ ಮರವೊಂದರ ರೆಂಬೆಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪ ಡಿಸಲಾಯಿತು. ಮಧೂರು ದೇವಸ್ಥಾನ ಪರಿಸರದ ಆಟೋರಿಕ್ಷಾ ಸ್ಟಾಂಡ್ನಲ್ಲಿ ಚಂದ್ರ ಶೇಖರ ಮಣಿಯಾಣಿ ಆಟೋರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದರು. ಇವರ ಪತ್ನಿ ಪ್ರಮೀಳಾ ಈ ಹಿಂದೆ ಅಸೌಖ್ಯದಿಂದ ನಿಧನ ಹೊಂದಿದ್ದರು.
ಮೃತರು ಮಕ್ಕಳಾದ ಮಿಥೇಶ್ (ಬೆಂಗಳೂರು), ಮೋಹಿತ್, ಪ್ರಿತೇಶ್ (ಇಬ್ಬರೂ ವಿದ್ಯಾರ್ಥಿಗಳು) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.






