ಅರಿಯಾಳದ ಸರಕಾರಿ ಬಾವಿಯಿಂದ ಅಪಾಯ ಆಹ್ವಾನ: ಸ್ಥಳೀಯರಲ್ಲಿ ಭೀತಿ
ಮೀಯಪದವು: ಸುಮಾರು ೪೦ ಕುಟುಂಬಗಳು ನೀರಿಗಾಗಿ ಆಶ್ರಯಿಸುತ್ತಿರುವ ಬಾವಿಯೊಂದು ಅಪಾಯ ಆಹ್ವಾನಿಸುತ್ತಿದೆ. ಮೀಂಜ ಪಂಚಾಯತ್‌ನ ಅರಿಯಾಳ ವಾರ್ಡ್‌ನ ನವೋದಯ ನಗರದಲ್ಲಿರುವ ಸರಕಾರಿ ಬಾವಿಯೇ ಅಪಾಯ ಆಹ್ವಾನಿಸುತ್ತಿರುವುದು. ವಿವಿಧ ಕಡೆಗಳಲ್ಲಿ ಬಾವಿಯಲ್ಲಿ ನೀರು ಆರುತ್ತಿರುವಾಗಲೇ ನೀರಿರುವ ಬಾವಿ ಹುಡುಕಿ ಜನರು ಸಾಗುತ್ತಿದ್ದಾರೆ. ಇದರಂತೆ ನವೋದಯನಗರ ಸರಕಾರಿ ಬಾವಿಯಿಂದ ನೀರು ಸಂಗ್ರಹಿಸಲು ಪರಿಸರದವರಲ್ಲದೆ ದೂರದಿಂದಲೂ ತಲುಪುವ ಸಾಧ್ಯತೆ ಇದೆ.
ಈ ಬಾವಿಯ ಮೇಲ್ದಂಡೆಯ ಕಲ್ಲು ಕುಸಿದು ಬೀಳುವ ಸಿದ್ಧತೆಯಲ್ಲಿದೆ. ಕಟ್ಟೆಯ ಕಂಬಗಳು ಅಲುಗಾ ಡುತ್ತಿರುವುದು ನೀರು ಸೇದುವ ವೇಳೆ ಬೀಳುವ ಸಾಧ್ಯತೆಯೂ ಇದೆ. ಬಾವಿಯ ಪರಿಸರದಲ್ಲೇ ಮಕ್ಕಳು ಆಟವಾಡುತ್ತಿದ್ದು, ಬಾವಿಯ ಬಳಿ ಬರುವುದರಿಂದ ಅಪಾಯ ಭೀತಿ ಹುಟ್ಟಿಸುತ್ತಿದೆ.
ಈ ಬಾವಿಯನ್ನು ದುರಸ್ತಿಗೊಳಿಸಿ ಅಪಾಯ ಭೀತಿ ದೂರೀಕರಿಸ ಬೇಕೆಂದು ಸದಸ್ಯರ ಮೂಲಕ ಹಲವು ಬಾರಿ ಭಿನ್ನವಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದು ವರೆಗೂ ಯಾವುದೇ ಕ್ರಮ ಉಂ ಟಾಗಲಿಲ್ಲ. ಶೀಘ್ರ ಕ್ರಮ ಕೈಗೊಳ್ಳಲು ಪಂಚಾಯತ್ ಅಧಿಕಾರಿಗಳಲ್ಲಿ ಸ್ಥಳೀಯರು ಆಗ್ರಹಿಸಿದ್ದಾರೆ.