ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ: ಲೋಪದೋಷ ಸರಿಪಡಿಸದಿದ್ದರೆ ಆಂದೋಲನ-ಪಿ.ಕೆ. ಫೈಸಲ್
ಕಾಸರಗೋಡು: ಅವೈಜ್ಞಾನಿಕ ವಾದ ರಾಷ್ಟ್ರೀಯ ಹೆದ್ದಾರಿ ನಿರ್ಮಾ ಣದಿಂದ ಜನರು ಸಂಕಷ್ಟಕ್ಕೀಡಾ ಗಿದ್ದಾರೆಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಆರೋಪಿಸಿದ್ದಾರೆ. ಚೆರ್ಕಳ ದಿಂದ ಚಟ್ಟಂಚಾಲ್‌ವರೆಗಿರುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಉಂಟಾಗಿರುವ ಸಮಸ್ಯೆಗಳಿಂದ ಜನರು ತೊಂದರೆಗೀಡಾಗಿದ್ದು, ಇದಕ್ಕೆ ಯಾರು ಉತ್ತರ ಹೇಳುವರು ಎಂದು ಅವರು ಪ್ರಶ್ನಿಸಿದ್ದಾರೆ. ಬೇಸಿಗೆ ಮಳೆಯಲ್ಲೇ ಇಲ್ಲಿ ನೀರು ಸಂಗ್ರಹಗೊಂಡು ಮಣ್ಣು ಕುಸಿದುಬಿದ್ದ ಸ್ಥಳದಲ್ಲೇ ಮಳೆಗಾಲದಲ್ಲೂ ಕುಸಿ ದಿದೆ. ಕೇರಳದ ಹವಾಮಾನದ ಬಗ್ಗೆ ಏನೂ ತಿಳಿಯದ ಅನ್ಯ ರಾಜ್ಯದವ ರಾದ ಇಂಜಿನಿಯರ್‌ಗಳ ಸ್ಕೆಚ್‌ನಂತೆ ಮೇಘ ಕನ್‌ಸ್ಟ್ರಕ್ಷನ್ ಕಂಪೆನಿ ಅವೈಜ್ಞಾನಿಕವಾದ ನಿರ್ಮಾಣ ನಡೆಸುತ್ತಿದ್ದು ಇದರಿಂದ ಜನರು ತೊಂದರೆ ಅನುಭವಿಸಬೇಕಾಗಿ ಬರುತ್ತಿದೆ.
ರಸ್ತೆಗೆ ಹಾಕಿದ ಡಾಮರು, ಕೆಮಿಕಲ್, ಕೆಸರು ಮೊದಲಾದವು ಸಮೀಪದ ಬಾವಿ, ಕೆರೆಗಳಲ್ಲಿ ತುಂಬಿ ಜನರು ಕುಡಿಯಲು ನೀರಿಲ್ಲದೆ ಸಂಕಷ್ಟ ಪಡುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯೂ ತಲೆದೋರಿದೆ. ಈ ಕಂಪೆನಿಯ ನಿರ್ಮಾಣದ ಲೋಪದೋಷವನ್ನು ಈ ಮೊದಲು ಎತ್ತಿತೋರಿಸಿದ್ದರೂ ಇಂತಹದ್ದೇ ಕಂಪೆನಿಗಳಿಗೆ ನಿರ್ಮಾಣ ಕೆಲಸ ಗಳನ್ನು ವಹಿಸಿಕೊಡುವುದು ಸರಕಾರ ಜನರಿಗೆ ಎಸೆಯುವ ಸವಾಲು ಎಂದು ಅವರು ನುಡಿದಿದ್ದಾರೆ. ಶೀಘ್ರವೇ ಲೋಪ ದೋಷಗಳನ್ನು ಸರಿಪಡಿಸ ದಿದ್ದರೆ ತೀವ್ರ ಆಂದೋಲನಕ್ಕೆ ಇಂಡಿಯನ್ ನೇಶ ನಲ್ ಕಾಂಗ್ರೆಸ್ ಮುಂದಾಗಲಿದೆ ಯೆಂದು ಪಿ.ಕೆ. ಫೈಸಲ್ ಎಚ್ಚರಿಸಿದ್ದಾರೆ.