ಅಸೌಖ್ಯದಿಂದ ಬಳಲುತ್ತಿದ್ದ ಬಾಲಕ ನಿಧನ
ಕೂಡ್ಲು: ಹಲವು ವರ್ಷಗಳಿಂದ ವಿವಿಧ ರೀತಿಯ ಅಸೌಖ್ಯದಿಂದ ಬಳಲುತ್ತಿದ್ದ ಬಾಲಕ ನಿಧನ ಹೊಂದಿ ದನು. ಕೂಡ್ಲು ನಿವಾಸಿ ಹಾಗೂ ಹೊಸಂಗಡಿಯ ಬ್ಯಾಂಕೊಂದರಲ್ಲಿ ಅಪ್ರೈಸರ್ ಆಗಿರುವ ಬಿ.ಎಂ. ಗಿರೀಶ್ ಆಚಾರ್ಯ- ಮಮತಾ ಗೌರಿ ದಂಪತಿ ಪುತ್ರ ದೀಕ್ಷಿತ್ ಆಚಾರ್ಯ (7) ಇಂದು ಬೆಳಿಗ್ಗೆ ನಿಧನ ಹೊಂದಿದ್ದಾನೆ. ವಿವಿಧ ರೀತಿಯ ರೋಗದಿಂದ ಬಳಲುತ್ತಿದ್ದ ಈ ಬಾಲ ಕನಿಗೆ ತಲೆಗೆ ಶಸ್ತ್ರಚಿಕಿತ್ಸೆ ಇತ್ತೀಚೆಗೆ ನಡೆಸಲಾಗಿತ್ತು. ಎರ್ನಾಕುಳಂ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿರುವ ಮಧ್ಯೆ ಇಂದು ನಿಧನ ಸಂಭವಿಸಿದೆ. ಚಿಕಿತ್ಸೆ ಗಾಗಿ ಬಾರೀ ಮೊತ್ತ ಬೇಕಾಗಿ ಬಂದಿದ್ದು, ದಾನಿಗಳ ನೆರವು ಆಗ್ರಹಿಸ ಲಾಗಿತ್ತು. ಮೃತ ಬಾಲಕ ತಂದೆ, ತಾಯಿ ಹಾಗೂ ಏಕ ಸಹೋದರಿ ನಮ್ರತಾಳನ್ನು ಅಗಲಿದ್ದಾನೆ.