ಅಸೌಖ್ಯ ತಗಲಿ ಶಾಲಾ ವಿದ್ಯಾರ್ಥಿನಿ ಮೃತ್ಯು
ಕಾಸರಗೋಡು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಶಾಲಾ ವಿದ್ಯಾರ್ಥಿನಿ ಮೃತಪಟ್ಟಳು. ಅಣಂಗೂರು ಕೊಲ್ಲಂ ಬಾಡಿ ನಿವಾಸಿ ಯೂ, ಅಣಂಗೂರಿ ನಲ್ಲಿ ವ್ಯಾಪಾರಿ ಯಾಗಿರುವ ನವೀನ್ ಎಂಬವರ ಪುತ್ರಿ ಸಾನ್ವಿ ಎನ್.ಕೆ (12) ಮೃತಪಟ್ಟ ಬಾಲಕಿ. ಈಕೆ ಕಾಸರಗೋಡು ವಿದ್ಯಾನಗರ ಚಿನ್ಮಯ ವಿದ್ಯಾಲಯದ ೮ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಕಳೆದ ನಾಲ್ಕು ತಿಂಗಳಿಂದ ಈಕೆಗೆ ತೀವ್ರ ಅಸೌಖ್ಯ ತಗಲಿತ್ತೆನ್ನಲಾಗಿದೆ. ಮಂ ಗಳೂರಿನ ಖಾಸಗಿ ಆಸ್ಪತ್ರೆಯಿಂದ ಈಕೆಗೆ ಚಿಕಿತ್ಸೆ ಪಡೆಯಲಾಗುತ್ತಿತ್ತು. ಇಂದು ಬೆಳಿಗ್ಗೆ ಮನೆಯಲ್ಲಿ ಅಸೌಖ್ಯ ಉಲ್ಭಣಗೊಂಡು ಸಾನ್ವಿ ಮೃತ ಪಟ್ಟಳು. ನವೀನ್‌ರ ಪತ್ನಿ ಸ್ವಾತಿ ಅಸೌಖ್ಯ ತಗಲಿ ಐದು ವರ್ಷ ಹಿಂದೆ ಮೃತಪಟ್ಟದ್ದರು. ಅನಂತರ ಪುತ್ರ ಸನ್ವಿತ್ ಕೂಡಾ ಅಸೌಖ್ಯ ಬಾಧಿಸಿ ಮೃತಪಟ್ಟ ದಾರುಣ ಘಟನೆ ನಡೆದಿತ್ತು. ಇದೀಗ ಪುತ್ರಿ ಕೂಡಾ ಮೃತಪಟ್ಟಿರು ವುದರಿಂದ ಕುಟುಂಬ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.