ಅಸೌಖ್ಯ: ಪ್ರೆಸ್ ಮಾಲಕ ನಿಧನ
ಉಪ್ಪಳ: ಮೆದುಳು ಸಂಬಂಧ ಅಸೌಖ್ಯದಿಂದ ಚಿಕಿತ್ಸೆಯಲ್ಲಿದ್ದ ಪ್ರೆಸ್ ಮಾಲಕ ನಿಧನ ಹೊಂದಿದರು. ಕುಂಬಳೆ ಆರಿಕ್ಕಾಡಿ ಕೆಳಗಿನ ಮನೆಯ ಪುರೋಹಿತ ರಾಮಕೃಷ್ಣ ಆಚಾರ್ಯ-ಜಯ ಲಕ್ಷ್ಮಿ ದಂಪತಿ ಪುತ್ರ ನಾಗಪ್ರಸಾದ್ ಆಚಾರ್ಯ (35) ನಿನ್ನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕಳೆದ ಎರಡು ವಾರ ಗಳಿಂದ ಅಸೌಖ್ಯ ತಗಲಿ ಚಿಕಿತ್ಸೆ ಯಲ್ಲಿದ್ದರು. ಕುಂಬಳೆ ಪೊಲೀಸ್ ಸ್ಟೇಶನ್ ರಸ್ತೆಯಲ್ಲಿರುವ ಪ್ರಿಂಟಿಂಗ್ ಪ್ರೆಸ್ನ ಮಾಲಕರಾಗಿದ್ದಾರೆ. ಮೃತರು ಪತ್ನಿ ಹರ್ಷಲತಾ, ಪುತ್ರಿ ಅನುಗ್ರಹ, ಸಹೋದರರಾದ ಲಕ್ಷ್ಮಿಪ್ರಸಾದ ಆಚಾರ್ಯ, ದುರ್ಗಾಪ್ರಸಾದ ಆಚಾರ್ಯ, ವಿನಾಯಕ ಆಚಾರ್ಯ ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.