ಅಸೌಖ್ಯ: ಯುವತಿ ನಿಧನ
ಬಂದ್ಯೋಡು: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪ ಟ್ಟರು. ಅಶೋಕನಗರ ಅಡ್ಕ ನಿವಾಸಿ ರಮೇಶ ಪೂಜಾರಿ- ಉಷಾ ದಂಪತಿ ಪುತ್ರಿಯಾದ ಐಶ್ವರ್ಯ (28) ಮೃತಪಟ್ಟ ಯುವತಿ. ಇವರನ್ನು ನೆಲ್ಯಾಡಿ ಸಮೀಪದ ಪವನ್‌ರಾಜ್ ಎಂಬವರಿಗೆ ಎರಡು ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ಆ ಬಳಿಕ ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ದ್ದರು. ಇವರಿಗೆ ಮಕ್ಕಳಿಲ್ಲ. ಮೃತರು ಪತಿ, ತಂದೆ, ತಾಯಿ, ಸಹೋದರ ದೀಕ್ಷಿತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.