ಅಸೌಖ್ಯ: ಹವ್ಯಾಸಿ ಕಲಾವಿದ ನಿಧನ

ಪೈವಳಿಕೆ: ಕುರುಡಪದವು ನಿವಾಸಿ ವೆಂಕಟೇಶ್ (49) ನಿಧನ ಹೊಂದಿದರು. ಅಸೌಖ್ಯ ತಗಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಈ ಹಿಂದೆ ಉಪ್ಪಳದಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿ ನೌಕರರಾಗಿದ್ದರು. ಹವ್ಯಾಸಿ ಯಕ್ಷಗಾನ, ನಾಟಕ ಕಲಾವಿದ ರಾಗಿದ್ದ ಇವರು ಕುರುಡಪದವು ಶ್ರೀರಾಮ ಫ್ರೆಂಡ್ಸ್ ಸರ್ಕಲ್‌ನ ಸಕ್ರಿಯ ಸದಸ್ಯರಾಗಿದ್ದರು. ತಂದೆ ಕೃಷ್ಣ ಮೂಲ್ಯ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ತಾಯಿ ಶಾರದ, ಪತ್ನಿ ಸುಷ್ಮಾ, ಮಕ್ಕಳಾದ ರಿತೀಶ್, ರಿಷಿಕ, ಸಹೋದರಿಯ ರಾದ ಮಮತಾ, ಉಷಾ, ವಾಣಿ, ಸಹೋದರ ಲಕ್ಷ್ಮಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page