ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಬಸ್ ಚಾಲಕ ನಿಧನ
ಪೆರ್ಲ: ಕ್ಷೇತ್ರ ಪರಿಸರದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಬಸ್ ಚಾಲಕ ರೊಬ್ಬರು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಮೃತಪಟ್ಟರು.
ಬಜಕೂಡ್ಲು ನಿವಾಸಿ ಗಿರಿಧರ ಪೂಜಾರಿ (56) ಮೃತಪಟ್ಟ ವ್ಯಕ್ತಿ. ಮೊನ್ನೆ ಸಂಜೆ 6 ಗಂಟೆ ವೇಳೆ ಇವರು ಪೆರ್ಲ ಶ್ರೀ ಅಯ್ಯಪ್ಪ ಕ್ಷೇತ್ರ ಸಮೀಪ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊ ಯ್ಯುತ್ತಿದ್ದಂತೆ ಸಾವು ಸಂಭವಿಸಿದೆ. ಅಸ್ವಸ್ಥರಾಗಲು ಕಾರಣವೇನೆಂದು ತಿಳಿದುಬಂದಿಲ್ಲ.
ಪೆರ್ಲ ಶ್ರೀ ಅಯ್ಯಪ್ಪ ಮಂದಿ ರದ ಗುರುಸ್ವಾಮಿಯಾಗಿದ್ದ ಇವರು ಪ್ರತಿ ವರ್ಷ ಹಲವಾರು ಅಯ್ಯಪ್ಪ ಭಕ್ತರೊಂದಿಗೆ ಶಬರಿಮಲೆ ಕ್ಷೇತ್ರ ದರ್ಶನ ನಡೆಸುತ್ತಿದ್ದರು. ವಿಶ್ವಹಿಂದೂ ಪರಿಷತ್ ಪದಾಧಿಕಾರಿ ಯಾಗಿ ಕಾರ್ಯಾಚರಿಸಿ ದ್ದರು. ಮೃತರು ಪತ್ನಿ ಯಶೋದ (ಸೇರಾಜೆ ಅಂಗನವಾಡಿ ಅಧ್ಯಾಪಿಕೆ), ಮಕ್ಕಳಾದ ಅಭಿರಾಜ್, ಅನುಷ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.