ಆಂಧ್ರಪ್ರದೇಶದಲ್ಲಿ ರಾಜ್ಯ ಸಾರಿಗೆ ಬಸ್ ಕಳವು
ಅಮರಾವತಿ: ಆಂಧ್ರಪ್ರದೇಶದ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಸರ್ವೀಸ್ ಬಸ್‌ನ್ನು ಕಳವುಗೈಯ್ಯಲಾಗಿದೆ. ಆದಿತ್ಯವಾರ ರಾತ್ರಿ ಸಂಚಾರ ಮುಗಿಸಿ ದುರಸ್ತಿ ಕೆಲಸಗಳಿಗಾಗಿ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಬಸ್ ನಾಪತ್ತೆಯಾಗಿದೆ. ಅನಘಪ್ಪಳ್ಳಿ ಜಿಲ್ಲೆಯ ನರ್ಸಿ ಪಟ್ಟಣ ಡಿಪ್ಪೋದಿಂದ ಬಸ್ ಕಾಣೆಯಾಗಿದೆ. ಈಬಗ್ಗೆ ನೌಕರರು ಡಿಪೋ ಅಧಿಕಾ ರಿಗಳಿಗೆ ತಿಳಿಸಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ನಡೆಸಿದ ತನಿಖೆಯಲ್ಲಿ ಅಲ್ಲೂರಿ ಜಿಲ್ಲೆಯ ಚಂದಪ್ಪಳ್ಳಿಯಲ್ಲಿ ಬಸ್ ಪತ್ತೆಹಚ್ಚಲಾಗಿದೆ. ಬಸ್ ಕಳವುಗೈದಿರುವುದಾಗಿ ಶಂಕಿಸುವ ಓರ್ವನನ್ನು ಕಸ್ಟಡಿಗೆ ತೆಗೆಯಲಾಗಿದೆ.