ಆಟವಾಡುತ್ತಿದ್ದಾಗ ಗೇಟ್ ದೇಹದ ಮೇಲೆ ಬಿದ್ದು ಮಗು ಮೃತ್ಯು
ಕಲ್ಲಿಕೋಟೆ: ಆಟವಾಡುತ್ತಿದ್ದ ವೇಳೆ ಗೇಟ್ ದೇಹದ ಮೇಲೆ ಬಿದ್ದು ಮೂರರ ಹರೆಯದ ಮಗು ಮೃತಪಟ್ಟ ಘಟನೆ ನಡೆದಿದೆ. ವಂಡೂರು ಏರಾಂತೋಡಿಲ್ ನಿವಾಸಿ ಸಮೀರ್-ಶಿಜಿ ದಂಪತಿಯ ಪುತ್ರ ಐರಬಿಂದ್ ಸಮೀರ ಮೃತಪಟ್ಟ ಮಗು.
ನಿಲಾಂಬೂರು ಮಣಲೋಡಿಯ ಬಾಡಿಗೆ ಮನೆ ಬಳಿ ನಿನ್ನೆ ಸಂಜೆ ಮಗು ಆಟವಾಡುತ್ತಿದ್ದ ವೇಳೆ ಗೇಟ್ ದೇಹದ ಮೇಲೆ ಬಿದ್ದಿದೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಮಗುವನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸುತ್ತಿದ್ದಂತೆ ಸಾವು ಸಂಭವಿಸಿದೆ. ಮಗುವಿಗೆ ಶೆಸ, ಅಫ್ಸಿ ಎಂಬಿಬ್ಬರು ಸಹೋದರರಿದ್ದಾರೆ.