ಆಟೋರಿಕ್ಷಾ ಮಜ್ದೂರ್ ಸಂಘ ಮುಳ್ಳೇರಿಯ ಘಟಕ ಸಮ್ಮೇಳನ
ಮುಳ್ಳೇರಿಯ: ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಮುಳ್ಳೇರಿಯ ಘಟಕ ಸಮ್ಮೇಳನ ಜರಗಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಘಟಕ ಅಧ್ಯಕ್ಷ ಸದಾಶಿವ ಅಧ್ಯಕ್ಷತೆ ವಿಸಿದರು. ಬಿಎಂಎಸ್ ಜಿಲ್ಲಾ ಜೊತೆ ಕಾರ್ಯದರ್ಶಿ ಲೀಲಾಕೃಷ್ಣನ್, ವಲಯ ಅಧ್ಯಕ್ಷ ಸಿ.ಎಚ್. ಆನಂದ, ಕಾರ್ಯದರ್ಶಿ ಭಾಸ್ಕರನ್ ಮಾತನಾಡಿದರು. ಅಸಂಘಟಿತ ಕಾರ್ಮಿಕರ ಸಂಘ ಜಿಲ್ಲಾಧ್ಯಕ್ಷ ಎಂ.ಕೆ. ರಾಘವನ್ ಸಮಾರೋಪ ಭಾಷಣ ಮಾಡಿದರು. ನೂತನ ಘಟಕ ಅಧ್ಯಕ್ಷರಾಗಿ ನಾರಾಯಣನ್ ಕರಿಂಬುವಳಪ್ಪ್, ಕಾರ್ಯದರ್ಶಿಯಾಗಿ ಸದಾಶಿವ, ಕೋಶಾಧಿಕಾರಿಯಾಗಿ ಜನಾರ್ದನರನ್ನು ಆಯ್ಕೆ ಮಾಡಲಾಯಿತು. ಘಟಕ ಕಾರ್ಯದರ್ಶಿ ಜಯಂತ ಸ್ವಾಗತಿಸಿ, ರಮೇಶ್ ಆಲಂತಡ್ಕ ವಂದಿಸಿದರು.