ಆಟೋ ಚಾಲಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಆಟೋ ರಿಕ್ಷಾ ಚಾಲಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೇಡಗಂ ಭೀಮುಂಗಾಲ್ ಅಮ್ಮಂಗೋಡು ತಾಯಲ್‌ನ ಸಿ.ಕೆ. ಗೋಪಾಲ-ಕಲ್ಯಾಣಿ ದಂಪತಿ ಪುತ್ರ ಸಿ.ಕೆ. ಪ್ರಶಾಂತ್ (37) ಸಾವನ್ನಪ್ಪಿದ ಯುವಕ. ಅವಿವಾಹಿತರಾಗಿರುವ ಇವರು ಅಸೌಖ್ಯದಿಂದ ಬಳಲುತ್ತಿದ್ದರೆನ್ನ ಲಾಗಿದೆ. ಇವರ ನಿನ್ನೆ ಮನೆ ಪಕ್ಕದ ಶೆಡ್ಡಿನೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರು ಸಹೋದರರಾದ ಸಿ.ಕೆ. ಪ್ರಮೋದ್, ಸಿ.ಕೆ. ವಿನೋದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬೇಡಗಂ ಪೊಲೀಸರು ತನಿಖೆ ನಡೆಸಿದರು.