ಆಟೋ ರಿಕ್ಷಾ-ಕಾರು ಢಿಕ್ಕಿ: ಓರ್ವ ಮೃತ್ಯು
ಕಾಸರಗೋಡು: ಆಟೋ ರಿಕ್ಷಾ ಮತ್ತು ಕಾರು ಪರಸ್ಪರ ಢಿಕ್ಕಿ ಹೊಡೆದು ಆಟೋ ರಿಕ್ಷಾ ಚಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಕರಿವೆಳ್ಳೂರು ಆಟೋ ರಿಕ್ಷಾ ಸ್ಟ್ಯಾಂಡ್‌ನ ಚಾಲಕ ಚೆರ್ವತ್ತೂರು ಕೊಡಕ್ಕಾಡ್ ವಲಿಯಪೊಯಿಲ್‌ನ ಪುಳುಕ್ಕುಲ್ ದಾಮೋದರನ್ (67) ಸಾವನ್ನಪ್ಪಿದ ದುರ್ದೈವಿ.
ತಮಿಳುನಾಡು ನಿವಾಸಿ ಹಾಗೂ ಚೆರ್ವತ್ತೂರು ಗ್ರಾಮ ಕಚೇರಿ ಬಳಿ ವಾಸಿಸುತ್ತಿರುವ ಅನ್ನಪೂರ್ಣ(27) ಎಂಬವರು ಆಟೋ ರಿಕ್ಷಾದಲ್ಲಿ ಚೆರ್ವತ್ತೂರಿಗೆ ಬರುತ್ತಿದ್ದ ದಾರಿ ಮಧ್ಯೆ ಆಟೋ ರಿಕ್ಷಾಕ್ಕೆ ಕಾರೊಂದು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ದಾಮೋ ದರನ್ ಮತ್ತು ಅನ್ನಪೂರ್ಣ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸ ಲಾಯಿತಾದರೂ ದಾಮೋದರನ್‌ರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ದಿ. ಪನಂಙಡಿ ಕುಂಞಂಬು ಪುಳುಕ್ಕಲ್-ಮಾಧವಿಯಮ್ಮ ದಂಪತಿ ಪುತ್ರನಾಗಿರುವ ಮೃತ ದಾಮೋದರನ್ ಪತ್ನಿ ಭಾರ್ಗವಿ, ಮಕ್ಕಳಾದ ಶರಣ್ಯ, ಲಾವಣ್ಯ, ಅಳಿಯಂದಿರಾದ ಜೋಶಿ, ಧನೇಶ್, ಸಹೋದರ-ಸಹೋದರಿಯರಾದ ಭಾಸ್ಕರನ್, ಕುಂಞಿಕಣ್ಣನ್, ಲಕ್ಷ್ಮಿ ಹಾಗೂ ಅಪಾರ ಬಂದು-ಮಿತ್ರರನ್ನು ಅಗಲಿದ್ದಾರೆ.