ಆದಿವಾಸಿ ಕ್ಷೇಮಸಮಿತಿಯಿಂದ ಬಾಯಾರು ವಿಲ್ಲೇಜ್ ಕಚೇರಿಗೆ ಮಾರ್ಚ್
ಪೈವಳಿಕೆ: ಒಂದೇ ಸ್ಥಳವನ್ನು ಇಬ್ಬರಿಗೆ ನೀಡಿದ ಬಾಯಾರ್ ವಿಲ್ಲೇಜ್‌ನ ಪಾದೆಕಲ್ಲು ಆರ್‌ಎಸ್.ನಂ.೧೧೩ರ ಸ್ಥಳದ ಬಗ್ಗೆ ತನಿಖೆ ನಡೆಸಬೇಕು, ಎಸ್‌ಟಿಯವರಿಗೆ ನೀಡಿದ ಸ್ಥಳವನ್ನು ಅತಿಕ್ರಮಿಸಿ ಬೇಲಿ ಹಾಕಿರುವುದನ್ನು ತೆಗೆದು ಎಸ್‌ಟಿಯವರ ಸ್ಥಳವನ್ನು ಅಳತೆ ಮಾಡಿ ನೀಡಬೇಕು, ಕರ್ನಾಟಕದಿಂದ ಮದುವೆಯಾಗಿ ಬಂದವರಿಗೆ ಕೇರಳದಲ್ಲಿ ಜಾತಿ ಪ್ರಮಾಣಪತ್ರ ಲಭಿಸುವುದಿಲ್ಲ. ಇದನ್ನು ಲಭ್ಯಗೊಳಿಸಬೇಕು, ಎಸ್‌ಟಿ ವಿಭಾಗದವರ ಮೇಲೆ ನಡೆಯುವ ದೌರ್ಜನ್ಯ, ಅವಗಣನೆಯನ್ನು ಕೊನೆಗೊಳಿಸಬೇಕು ಮೊದಲಾದ ಬೇಡಿಕೆಯನ್ನು ಮುಂದಿಟ್ಟು ಆದಿವಾಸಿ ಕ್ಷೇಮ ಸಮಿತಿ ಬಾಯಾರು ವಿಲ್ಲೇಜ್ ಕಚೇರಿಗೆ ಮಾರ್ಚ್, ಧರಣಿ ನಡೆಸಲಾಯಿತು.
ಎ.ಕೆ.ಎಸ್. ಬಾಯಾರು ಸಮಿತಿಯ ಸದಸ್ಯ ಚನಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಅಶೋಕ್ ಉದ್ಘಾಟಿಸಿದರು. ಮಂಜೇಶ್ವರ ಏರಿಯಾ ಕಾರ್ಯದರ್ಶಿ ಚಂದ್ರ ನಾಕ್ ಮಾನಿಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ರಾಜನ್ ಏರಿಯಾ, ಅಧ್ಯಕ್ಷೆ ಸರೋಜ ಶುಭ ಕೋರಿದರು.
ಚಿಪ್ಪಾರ್‌ಪದವಿನಿಂದ ಜಾಥಾ ಆರಂಭಿಸಿ ಬಾಯಾರು ಸೊಸೈಟಿ ಮೂಲಕ ಬಾಯಾರು ವಿಲ್ಲೇಜ್‌ಗೆ ತಲುಪಿತು. ಹರೀಶ್ ಗಾಳಿಯಡ್ಕ, ರಾಜೇಶ್ ಗಾಳಿಯಡ್ಕ, ಸುಂದರ ಹಾಲೆಮೂಲೆ, ಪುಷ್ಪ ಧರ್ಮತ್ತಡ್ಕ, ರಾಮ ನಾಕ್, ಸೋಮನಾಥ ಬಳ್ಳೂರು, ರಾಮನಾಕ್, ಮಾಧವ ನೇತೃತ್ವ ನೀಡಿದರು. ಜನಾರ್ದನ ಬೊಟ್ಟಾರಿ ಸ್ವಾಗತಿಸಿ, ಬಾಲಕೃಷ್ಣ ಪಿ. ವಂದಿಸಿದರು.