ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಪೆರುಂಕಳಿಯಾಟ ಮಹೋತ್ಸವ 19ರಿಂದ

ಮುಳ್ಳೇರಿಯ: ಆದೂರು ಶ್ರೀ ಭಗವತಿ ಕ್ಷೇತ್ರದಲ್ಲಿ ಪೆರುಂಕಳಿಯಾಟ ಮಹೋತ್ಸವ ಜನವರಿ 19ರಿಂದ 24ರವರೆಗೆ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ 17ರಂದು ಬೆಳಿಗ್ಗೆ 8.18ರಿಂದ 8.58ರವರೆಗಿನ ಮುಹೂರ್ತದಲ್ಲಿ ಶುದ್ಧಿಕಲಶ, ಉಗ್ರಾಣ ಮುಹೂರ್ತ, ನಾಗದೇವರಿಗೆ ಆಶ್ಲೇಷಬಲಿ ನಡೆಯಲಿದೆ.
18ರಂದು ಬೆಳಿಗ್ಗೆ 11ಕ್ಕೆ ಆಚಾರ್ಯಸಂಗಮ, ಘೋಷಯಾತ್ರೆ, ಡಂಗುರ ಮೆರವಣಿಗೆ, 19ರಂದು ಬೆಳಿಗ್ಗೆ 7.30ಕ್ಕೆ ಆದೂರು ಮಲ್ಲಾವರ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ತಂತ್ರಿವರ್ಯರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸಿ ವಾದ್ಯಘೋಷ ಗಳೊಂದಿಗೆ ದೀಪವನ್ನು ದೈವಸ್ಥಾನಕ್ಕೆ ತರುವುದು, 9ಕ್ಕೆ ಬ್ರಹ್ಮಶ್ರೀ ವಾಸುದೇವ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ, 9.30ಕ್ಕೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ ದೈವಸ್ಥಾನದ ಪ್ರಾಂಗಣದಲ್ಲಿ ಧ್ವಜಾರೋಹಣ ದೊಂದಿಗೆ ಉತ್ಸವ ಆರಂಭಗೊಳ್ಳಲಿದೆ. ಬಳಿಕ ದೈವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. 10.30ರಿಂದ ಚಿನ್ಮಯ ಮಿಶನ್ ಕಾಸರಗೋಡು ಅವರಿಂದ ಗೀತಾ ಪಾರಾಯಣ ನಡೆಯಲಿದೆ. ಮಧ್ಯಾಹ್ನ ನಂತರ ವಿವಿಧ ದೈವಗಳ ತೊಡಂಙಲ್, ವೆಳ್ಳಾಟ ನಡೆಯಲಿರುವುದು. ಈ ತಿಂಗಳ 24ರವರೆಗೆ ಮುಂದುವರಿಯುವ ಈ ಮಹೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ.
351 ವರ್ಷಗಳ ನಂತರ ನಡೆಯುವ ಪೆರುಂಕಳಿಯಾಟ ಮಹೋತ್ಸವದ ಕಾರ್ಯಕ್ರಮಗಳ ಕುರಿತು ವಿವರಿಸಲು ಕಾಸರಗೋಡು ಪ್ರೆಸ್ಕ್ಲಬ್ನಲ್ಲಿ ನಿನ್ನೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಪೆರುಂಕಳಿಯಾಟ ಮಹೋತ್ಸವ ಸಮಿತಿ ಅಧ್ಯಕ್ಷ ಬಿಪಿನ್ದಾಸ್ ರೈ ಆದೂರುಗುತ್ತು, ಪ್ರಧಾನ ಕಾರ್ಯದರ್ಶಿ ಹರೀಶ್ಚಂದ್ರ ಆರ್. ಬೇರಿಕೆ, ಕೋಶಾಧಿಕಾರಿ ಕೃಷ್ಣಪ್ಪ ಕಾವುಗೋಳಿ, ದೇವಸ್ಥಾನ ಸಮಿತಿ ಅಧ್ಯಕ್ಷ ದಾಮೋದರನ್ ಕಾವುಗೋಳಿ, ರಘುರಾಮ ರೈ ನಡುಮನೆ, ದಿನೇಶ್ ಬಂಬ್ರಾಣ, ಅನಿಲ್ ಮಾಸ್ತರ್ ಮೊದಲಾದವರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page