ಆದೂರು ಶ್ರೀ ಭಗವತೀ ಕ್ಷೇತ್ರ ಪೆರುಂಕಳಿಯಾಟ ಮಹೋತ್ಸವ: ಪ್ರಾದೇಶಿಕ ಸಮಿತಿ ರೂಪೀಕರಣ
ಕಾಸರಗೋಡು: ನೆಲ್ಲಿಕುಂಜೆ ಲಲಿತಕಲಾ ಸದನದಲ್ಲಿ ಆದೂರು ಶ್ರೀ ಭಗವತೀ ಕ್ಷೇತ್ರ ಪೆರುಂಕಳಿಯಾಟ ಮಹೋತ್ಸವದ ಅಂಗವಾಗಿ ಪ್ರಾದೇಶಿಕ ಸಮಿತಿ ರೂಪೀಕರಣ ಸಭೆ ಜರಗಿತು. ಡಾ. ಅನಂತ ಕಾಮತ್ ಉದ್ಘಾಟಿಸಿದರು. ಡಾ. ಸುರೇಶ್ ಬಾಬು ಮುಖ್ಯ ಅತಿಥಿಯಾಗಿದ್ದರು. ಪೆರುಂಕಳಿಯಾಟ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ವಿಪಿನ್ದಾಸ್ ರೈ, ಅಧ್ಯಕ್ಷತೆ ವಹಿಸಿದರು. ವಿವಿಧ ಕ್ಷೇತ್ರಗಳ ಆಚಾರ ಸ್ಥಾನಿಕರು, ವೆಂಕಟ್ರಮಣ ಹೊಳ್ಳ, ಡಾ. ಶ್ರೀರಾಜ್, ಸಿ.ವಿ. ಪೊದುವಾಳ್, ಜನ್ನನ್ ಭಾಗವಹಿಸಿದರು. ಕೌನ್ಸಿಲರ್ ಗಳಾದ ವೀಣಾ ಅರುಣ್ ಕುಮಾರ್, ಉಮಾ ಎಂ, ಶ್ರೀಲತಾ ಟೀಚರ್, ಮಲ್ಲಿಕಾ ಪ್ರಭಾಕರನ್, ಉಪೇಂದ್ರನ್ ಕೋಟೆಕಣಿ, ಗುರುಪ್ರಸಾದ್ ಪ್ರಭು, ಉಮೇಶ್ ಕಾವುಗೋಳಿ, ಕಮಲಾಕ್ಷನ್ ಕೆ.ಎನ್, ಮಹೇಶ್, ರಾಮಕೃಷ್ಣ, ಅರವಿಂದಾಕ್ಷನ್, ನಾರಾಯಣ ಪೂಜಾರಿ, ಐತ್ತಪ್ಪ ಉಳಿಯತ್ತಡ್ಕ, ದಾಮೋದರನ್ ಕಾವುಗೋಳಿ, ಮಾಧವನ್ ಭಂಡಾರಬೀಡು, ದಾಮೋದರನ್ ಎರಿಯಾಕೋಟ, ಲೋಕೇಶ್ ಶುಭ ಕೋರಿದರು.
ವೆಂಕಟ್ರಮಣ ಹೊಳ್ಳರನ್ನು ಕಾಸರಗೋಡು ಪ್ರಾದೇಶಿಕ ಸಮಿತಿಯ ಅಧ್ಯಕ್ಷರಾಗಿಯೂ, ಉಪೇಂದ್ರನ್ ಕೋಟೆಕಣಿ ಹಾಗೂ ಕಮಲಾಕ್ಷನ್ ಕೆ.ಎನ್. ಎಂಬಿವರನ್ನು ಉಪಾಧ್ಯಕ್ಷ ರಾಗಿಯೂ, ಪದ್ಮನಾಭನ್ರನ್ನು ಕಾರ್ಯದರ್ಶಿಯಾಗಿಯೂ, ಗುರುಪ್ರಸಾದ್ ಪ್ರಭು, ನಾಗೇಶ್ ಕೆ., ರವಿಕೇಸರಿ ಎಂಬಿವರನ್ನು ಜೊತೆ ಕಾರ್ಯದರ್ಶಿಗಳಾಗಿಯೂ, ಪುರುಷೋತ್ತಮನ್ ಕೆ.ರನ್ನು ಕೋಶಾಧಿಕಾರಿಯಾಗಿಯೂ, ೧೦೧ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪದ್ಮನಾಭನ್ ವಂದಿಸಿದರು.