ಆದೂರು ಶ್ರೀ ಭಗವತೀ ಕ್ಷೇತ್ರ ಪೆರುಂಕಳಿಯಾಟ: ತರಕಾರಿ ಕೃಷಿ ಕೊಯ್ಲು
ಮುಳ್ಳೇರಿಯ: ಆದೂರು ಭಗವತಿ ಕ್ಷೇತ್ರದಲ್ಲಿ ಜ. 6ರಿಂದ ನಡೆಯಲಿರುವ ಪೆರುಂಕಳಿಯಾಟ ಮಹೋತ್ಸವದ ವೇಳೆ ನಡೆಸುವ ಅನ್ನಸಂತಪಣೆಗಾಗಿರುವ ತರಕಾರಿ ಕೃಷಿಯ ಪ್ರಥಮ ಕೊಯ್ಲು ನಡೆಯಿತು. ಕೈತ್ತೋಡು ಪ್ರಾದೇಶಿಕ ಸಮಿತಿ ಬೆಳೆದ ಚೀನಿಕಾಯಿಯ ಕೊಯ್ಲು ನಡೆಸಿ ಭಂಡಾರ ಮನೆಗೆ ಸಮರ್ಪಿಸಲಾಯಿತು. ಜನಾರ್ದ ನನ್ ನಾಯರ್,ಚಂದ್ರಶೇಖರ, ಪುರುಷೋತ್ತಮನ್, ಭಾಸ್ಕರ ಪಾಂಬಾಡಿ, ಭಾಸ್ಕರ ರಾವ್, ಜನಾರ್ದನ ರಾವ್, ಬಾಬು ಎಂಬಿವರು ನೇತೃತ್ವ ನೀಡಿದರು. ಮಲ್ಲಾವರ ಪಡುಮಂಟಮೆ ಭತ್ತೋತ್ಪಾದಕ ಸಮಿತಿಯ ಭತ್ತ ಬೆಳೆಯ ಕೊಯ್ಲು ನಡೆಸಲಾಗಿತ್ತು. ಉತ್ಸವ ಸಮಿತಿಯ ನೇತೃತ್ವದಲ್ಲಿ ವಿವಿಧ ಪ್ರಾದೇಶಿಕ ಸಮಿತಿಗಳ, ಕುಟುಂಬಶ್ರೀ ಸಹಕಾರದೊಂದಿಗೆ ಪ್ರಕಾಶ್ ಭಂಡಾರಿ, ರಘುರಾಮ ರೈ ನಡುಮನೆ, ಕಿರಣ್ ಮಾಡ ಎಂಬಿವರ ೫ ಎಕ್ರೆ ಸ್ಥಳದಲ್ಲಿ ಕೃಷಿ ಕೈಗೊಳ್ಳಲಾಗಿತ್ತು. ಕೊಯಂಕೂಡ್ಲು ಪ್ರಾದೇಶಿಕ ಸಮಿತಿ, ಕೈತ್ತೋಡು ಭಜನಾ ಮಂದಿರ ಪ್ರಾದೇಶಿಕ ಸಮಿತಿ ಸೌತೆ ಕೃಷಿ ನಡೆಸಿದೆ. ಭಕ್ತರಿಗೆ ಪ್ರಸಾದವಾಗಿ ನೀಡಲು ಅರಶಿನ ಹುಡಿಗಾಗಿ ಅರಶಿನ ಕೃಷಿಯನ್ನು ನಡೆಸಲಾಗಿದೆ.