ಆನ್ಲೈನ್ ಟ್ರೇಡಿಂಗ್: ಅಧ್ಯಾಪಿಕೆಗೆ 13 ಲಕ್ಷಕ್ಕೂ ಹೆಚ್ಚು ಮೊತ್ತ ನಷ್ಟ
ಕಾಸರಗೋಡು: ಆನ್ಲೈನ್ ಟ್ರೇಡಿಂಗ್ ವಂಚನೆಯಲ್ಲಿ ಅಧ್ಯಾಪಿಕೆಗೆ 13,37,950 ರೂ. ನಷ್ಟಗೊಂಡಿದೆ. ವಿದ್ಯಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಖಾಸಗಿ ಶಾಲೆಯ ಅಧ್ಯಾಪಿಕೆಗೆ ಈ ರೀತಿ ಹಣ ನಷ್ಟಗೊಂಡಿದೆ. ವಂಚನೆಗೆ ಸಂಬಂಧಿಸಿ ಕಾಸರಗೋಡು ಸೈಬರ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆನ್ಲೈನ್ ಟ್ರೇಡಿಂಗ್ ಎಂಬ ಹೆಸರಲ್ಲಿ ವಂಚನೆ ಮಾಡುವವರು ಅಧ್ಯಾಪಿಕೆಯನ್ನು ಸಂಪರ್ಕಿಸಿದ್ದಾರೆ. ಉತ್ತಮ ಗೆಳೆತನ ಹೊಂದಿದ ಬಳಿಕ ಆಪ್ ಡೌನ್ಲೋಡ್ ಮಾಡಿಸಿ ಹಣ ಠೇವಣಿ ಇರಿಸಲು ತಿಳಿಸಿ ವಂಚಿಸಲಾಗಿದೆ. ಪ್ರಥಮವಾಗಿ ಅಲ್ಪ ಮೊತ್ತಕ್ಕೆ ದೊಡ್ಡ ಲಾಭ ನೀಡಿ ಇನ್ನಷ್ಟು ಮೊತ್ತವನ್ನು ಠೇವಣಿಯಿರಿಸಲು ಪ್ರೇರಣೆ ನೀಡಿ ವಂಚನೆ ನಡೆಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.