ಆನ್‌ಲೈನ್ ಮೂಲಕ ಹಣ ವಂಚನೆ ತಡೆಗೆ ಕ್ರಮಎರಡು ಸಾವಿರ ಬ್ಯಾಂಕ್ ಖಾತೆಗಳು ಶೀಘ್ರ ರದ್ದು
ಕಾಸರಗೋಡು: ಲೋನ್ ಆಫ್, ಆನ್‌ಲೈನ್, ಒಟಿಪಿ ಇತ್ಯಾದಿಗಳ ಮೂಲಕ ರಾಜ್ಯದ ಹಲವರಿಂದಾಗಿ ಕೋಟಿಗಟ್ಟಲೆ ರೂ. ಲಪಟಾಯಿಸಿದ ಪ್ರಕರಣಗಳಿಗೆ ಸಂಬಂಧಿಸಿ ೨೦೦೦ದಷ್ಟು ಬ್ಯಾಂಕ್ ಖಾತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕೇರಳ ಪೊಲೀಸರು ದೇಶದ ಪ್ರಧಾನ ಬ್ಯಾಂಕ್‌ಗಳಿಗೆ ವರದಿ ಸಲ್ಲಿಸಿದ್ದಾರೆ.
೨೦೨೧ ದಿಂದ ಕೇರಳದಿಂದ ಹೀಗೆ ಲಪಟಾಯಿಸಲಾದ ಹಣ ಹೋಗಿ ಸೇರದ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸುವಂತೆ ಬ್ಯಾಂಕ್‌ಗಳೊಂದಿಗೆ ಪೊಲೀಸರು ಕೇಳಿಕೊಂಡಿದ್ದಾರೆ.
ವಂಚನೆ ಬಗ್ಗೆ ಪೊಲೀಸರು ಅಗತದ್ಯದ ಪುರಾವೆಗಳ ಸಹಿತ ಈ ವರದಿ ಸಲ್ಲಿಸಿದ್ದು, ಆದ್ದರಿಂದ ಅಂತಹ ಖಾತೆಗಳನ್ನು ಅಮಾನತುಗೊಳಿಸುವ ಅಥವಾ ರದ್ದುಪಡಿಸಬೇಕಾದ ಅನಿವಾರ್ಯತೆ ಬ್ಯಾಂಕ್‌ಗಳಿಗೆ ಉಂಟಾಗಲಿದೆ. ಈ ಬಗ್ಗೆ ನಾವು ವರದಿ ಸಲ್ಲಿಸಿದ ಏಳು ದಿನಗಳಲ್ಲಾಗಿ ಅಂತಹ ಖಾತೆಗಳನ್ನು ರದ್ದುಪಡಿಸಬೇಕೆಂದು ಪೊಲೀಸರು ಬ್ಯಾಂಕ್‌ಗಳೊಂದಿಗೆ ಕೇಳಿಕೊಂಡಿದ್ದಾರೆ.
ಇಂತಹ ವಂಚನೆಗೆ ಸಹಾಯ ಒದಗಿಸಿದ ೭೦ ಬ್ಯಾಂಕ್ ಖಾತೆಗಳು ಕೇರಳದಲ್ಲೇ ಇವೆ. ಈ ಖಾತೆಗಳಿಂದ ಪ್ರತೀ ತಿಂಗಳು ನಿಗದಿತ ಸಂಖ್ಯೆಯ ಹಣವನ್ನು ಇತರರಿಗೆ ವರ್ಗಾಯಿಸಿರುವುದನ್ನು ಪೊಲೀಸರು ತನಿಖೆಯಲ್ಲಿ ಪತ್ತೆಹಚ್ಚಿದ್ದಾರೆ. ಇದ್ಕಕಾಗಿ ಕೆಲವು ಸೈಬರ್ ವಂಚನಾ ಜಾಲಗಳ ಸಹಾಯವನ್ನೂ ಇಂತಹ ವಂಚಕರು ಪಡೆದಿರುವುದನ್ನು ಪತ್ತೆಹಚ್ಚಲಾಗಿದೆ. ಹೀಗೆ ಆನ್‌ಲೈನ್ ಮೂಲಕ ಲಪಟಾಯಿಸಲಾದ ಹೆಚ್ಚಿನ ಹಣ ದಿಲ್ಲಿ ಮತ್ತು ಛತ್ತೀಸ್ ಗಡ ರಾಜ್ಯಗಳ ಹಲವು ಬ್ಯಾಂಕ್‌ಗಳಿಗೆ ಹೋಗಿ ಸೇರಿದ್ದು, ಅಂತಹ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸುವ ಅಗತ್ಯದ ಕಾನೂನು ಕ್ರಮದಲ್ಲೂ ಪೊಲೀಸರು ತೊಡಗಿದ್ದಾರೆ.