ಆಯರ್‌ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ನಾಳೆಯಿಂದ
ಮುಳ್ಳೇರಿಯ: ಕಾರಡ್ಕ ಸಮೀಪದ ಆಯರ್‌ಕಾಡ್ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ದೀಪೋತ್ಸವ ನಾಳೆಯಿಂದ ಈ ತಿಂಗಳ ೫ರವರೆಗೆ ವಿವಿಧ ಕಾರ್ಯಕ್ರಮಗಳೊಂ ದಿಗೆ ನಡೆಯಲಿದೆ. ನಾಳೆ ಮುಂಜಾನೆ ೪ಕ್ಕೆ ದೀಪ ಪ್ರಜ್ವಲನೆ, ಮಹಾಗಣಪತಿ ಹೋಮ, ಬಳಿಕ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದೆ.
೧೦ ಗಂಟೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಬ್ರಹ್ಮಶ್ರೀ ಗಣೇಶ ತಂತ್ರಿ ದೇಲಂಪಾಡಿ ಇವರಿಗೆ ಪೂರ್ಣಕುಂಭ ಸ್ವಾಗತ, ೧೧ ಗಂಟೆಗೆ ಭಜನೆ, ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ೧.೩೦ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಎಡನೀರು ಶ್ರೀ ಆಶೀರ್ವಚನ ನೀಡುವರು. ಮಹೋತ್ಸವ ಸಮಿತಿ ಗೌರವಾಧ್ಯಕ್ಷ ರಘುರಾಮ ಬಲ್ಲಾಳ್ ಅಧ್ಯಕ್ಷತೆ ವಹಿಸುವರು. ಬಿ. ವಸಂತ ಪೈ ಬದಿಯಡ್ಕ, ಪ್ರವೀಣ್ ಕೋಡೋ ತ್ತ್, ಜಗದೀಶ್ ರಾವ್ ಧಾರ್ಮಿಕ ಭಾಷಣ ಮಾಡುವರು. ಹಲವರು ಉಪಸ್ಥಿತರಿರುವರು.
ಸಂಜೆ ೬ ಗಂಟೆಗೆ ಭಜನೆ, ದೀಪಾರಾಧನೆ, ೭ರಿಂದ ಯೋಗ ಡ್ಯಾನ್ಸ್, ಭಕ್ತಿಗಾನ ಸುಧಾ, ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ೪ರಂದು ಮುಂಜಾನೆ ೪ ಗಂಟೆಗೆ ದೀಪಾರಾಧನೆ, ಬಳಿಕ ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ ೬.೩೦ಕ್ಕೆ ಸಂಗೀತ ಕಛೇರಿ, ರಾತ್ರಿ ೮ಕ್ಕೆ ನೃತ್ಯ ವೈವಿಧ್ಯ, ೫ರಂದು ಮುಂಜಾನೆ ೪ ಗಂಟೆಗೆ ದೀಪಾರಾಧನೆ, ಮಹಾಗಣಪತಿ ಹೋಮ, ೯.೩೦ಕ್ಕ ಧಾರ್ಮಿಕ ಸಭೆ, ಶಬರಿಮಲೆ ಆಚಾರ ಸ್ಥಾನಿಕರಾದ ಗಣ್ಯವ್ಯಕ್ತಿಗಳಿಗೆ ಹಾಗೂ ತಂತ್ರಿ ವರ್ಯರಿಗೆ ಸ್ವಾಗತ, ಮಹಾಪೂಜೆ, ಅನ್ನ ಸಂತರ್ಪಣೆ, ಭಜನೆ, ಸಂಜೆ ೬ ಗಂಟೆಗೆ ಚೆಂಡೆ ಮೇಳ, ೬.೩೦ಕ್ಕೆ ಪಾಲಕೊಂಬು ಮೆರವಣಿಗೆ, ಮವ್ವಾರು ಶ್ರೀ ವಿಶ್ವಕರ್ಮ ಭಜನಾಮಂದಿರದಿಂದ ಹೊರಡಲಿದೆ. ರಾತ್ರಿ ೭ ಗಂಟೆಗೆ ಮಣಿಕಂಠ ಮಹಿಮೆ ಯಕ್ಷಗಾನ ಪ್ರದರ್ಶನ, ಬಳಿಕ ಮಹಾಪೂಜೆ, ೧೦.೩೦ಕ್ಕೆ ಅಯ್ಯಪ್ಪನ್ ವಿಳಕ್ಕ್ ಸಂಘದ ನೃತ್ಯ, ಪೂಜೆ ಬಳಿಕ ಭಜನಾ ಸಂಕೀರ್ತನೆ, ೬ರಂದು ಮುಂಜಾನೆ ಉಡ್ಕ್ ಪಾಟು, ಪಾಲ್ಕಿಂಡಿ ಮೆರವಣಿಗೆ, ಪೊಳಿಪ್ಪಾಟ್, ಅಯ್ಯಪ್ಪ ವಾವರ ಯುದ್ಧ ಸಹಿತ ವಿವಿಧ ಕಾರ್ಯಕ್ರಮ ನಡೆಯಲಿದೆ.