ಆಯುಷ್ಮಾನ್ ವಯೋ ವಂದನ್ ಯೋಜನೆ ಬುಡಮೇಲು ಮಾಡುವ ಕೇರಳ ಸರಕಾರದ ಕ್ರಮ ಖಂಡನೀಯ-ಬಿಜೆಪಿ
ಮಂಜೇಶ್ವರ :ಕೇಂದ್ರ ಸರಕಾರ ನೀಡುವ ಎಲ್ಲಾ ಯೋಜನೆಗಳನ್ನು, ಕೇರಳ ಸರಕಾರ ಬುಡಮೇಲು ಮಾಡುತ್ತಿದೆ. ದೇಶದಲ್ಲಿ ಮೋದಿ ಸರಕಾರ ಜಾರಿಗೆ ತಂದ ಪ್ರತಿ ಕುಟುಂಬಕ್ಕೆ ೫ಲಕ್ಷ ರೂ ಗಳ ಆರೋಗ್ಯ ಯೋಜನೆ ಕೇರಳ ಹಾಗೂ ಬಂಗಾಳ ದಲ್ಲಿ ಜಾರಿ ಆಗಲು ರಾಜ್ಯ ಸರಕಾರ ಅನುಮತಿ ನೀಡಿಲ್ಲ . ಈಗ ಕೇಂದ್ರ ನೂತನ ವಾಗಿ ಜಾರಿಗೆ ತಂದ ೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವಾರ್ಷಿಕ ೫ ಲಕ್ಷ ಆರೋಗ್ಯ ವಿಮಾ ಯೋಜನೆ ಅಯುಷ್ಮಾನ್
ವಯೋ ವಂದನ್ ಯೋಜನೆಯನ್ನು ಕೇರಳ ರಾಜ್ಯ ಸರಕಾರ ಹಾಗೂ ಆರೋಗ್ಯ ಇಲಾಖೆ ಕೇರಳದಲ್ಲಿ ಜಾರಿ ಮಾಡದೇ ಬಡವರನ್ನು, ಅನಾರೋಗ್ಯ ಪೀಡಿತರನ್ನು ಬಹಿರಂಗವಾಗಿ ವಂಚಿಸುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿದೆ.
ಕಳೆದ ೧ತಿಂಗಳಿAದ ರಾಜ್ಯದಲ್ಲಿ ಲಕ್ಷಾಂತರ ವೃದ್ಧರು, ಬಡವರು ಆಯುಷ್ಮಾನ್ ನೋಂದಣಿ ಮಾಡಿಸಿದ್ದಾರೆ. ಇದರಿಂದ ರಾಜ್ಯ ಸರಕಾರ ಮತ್ತೆ ತನ್ನ ಹಳೆಯ ಚಾಳಿ ಯನ್ನು ಮುಂದುವರಿಸಿ ರಾಜ್ಯದಲ್ಲಿ ಆಯುಷ್ಮಾನ್ ಅಂಗೀಕಾರ ಸಾಧ್ಯವಿಲ್ಲ, ಕೇಂದ್ರ ಯೋಜನೆಗೆ ಸಹಕಾರ ನೀಡಲು ಸಾಧ್ಯ ವಿಲ್ಲ ಎಂಬ ಬೇಜವಾಬ್ದಾರಿತನ ಮೊಂಡುವಾದದಿAದ ಬಡವರಿಗೆ ಅನ್ಯಾಯ ಮಾಡುತ್ತಿದೆ. ಆಯುಷ್ಮಾನ್ ನೋಂದಣಿ ಮಾಡಿದವರನ್ನು ಕಾರುಣ್ಯ ಯೋಜನೆಯಿಂದ ಹೊರಗಿಟ್ಟು ಯಾವುದೇ ಸೌಲಭ್ಯ ಸಿಗದಂತೆ ಮಾಡಿ, ಯಾವುದೇ ಆಸ್ಪತ್ರೆ ಗಳಲ್ಲಿ, ಅನ್ಯ ರಾಜ್ಯಗಳಲ್ಲೂ ಕೇರಳದ ಜನರಿಗೆ ಸೌಲಭ್ಯ ಸಿಗದಂತೆ ತಾಂತ್ರಿಕ ನೆಪ ಹೇಳುತ್ತಿದೆ. ಇದು ಅನ್ಯಾಯವೆಂದು ಬಿಜೆಪಿ ದೂರಿದೆ.
ಸಭೆಯಲ್ಲಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇರಳ ಸರಕಾರ ಬಡವರಿಗೆ ಸಿಗುವ ಸೌಲಭ್ಯಗಳನ್ನು ತಡೆ ಹಿಡಿಯುತ್ತಿದೆ. ಇದನ್ನು ಕೇರಳದ ನಾಗರೀಕ ಸಮೂಹ ಒಗ್ಗಟಾಗಿ ಎದುರಿಸಬೇಕೆಂದು ಬಿಜೆಪಿ ತಿಳಿಸಿದೆ. ಕೇಂದ್ರ ಯೋಜನೆಗಳನ್ನು ಕೇರಳದ ಲ್ಲಿಯೂ ಸಮಗ್ರ ಜಾರಿ ಮಾಡಲು ರಾಜ್ಯ ಸರಕಾರಕ್ಕೆ ಆದೇಶಿಸಬೇಕೆಂದು ಬಿಜೆಪಿ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಬಿಜೆಪಿ ಮಂಡಲ ಸಭೆ ಮಿಯಪದವು ನಾಯಕ್ ನಿವಾಸ ದಲ್ಲಿ ಜರಗಿತು. ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ರಾಜ್ಯ ಸಮಿತಿ ಸದಸ್ಯ ಸತೀಶ್ಚಂದ್ರ ಭಂಡಾರಿ, ಮಾತನಾಡಿದರು.
ಮುಖಂಡರಾದ ಕೆವಿ ಭಟ್, ಸದಾಶಿವ ಚೇರಾಲ್, ಯಾದವ ಬಡಾಜೆ, ತುಳಸಿ ಕುಮಾರಿ, ಪದ್ಮನಾಭ ರೈ, ಕೋಡಿ ಚಂದ್ರಶೇಖರ, ಪ್ರವೀಣಚಂದ್ರ ಬಲ್ಲಾಳ್, ಜನಪ್ರತಿನಿಧಿಗಳು, ನೇತಾರರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ. ಚಂದ್ರಹಾಸ ಪೂಜಾರಿ ವಂದಿಸಿದರು.