ಆಯೋಗಕ್ಕೆ ಬಂದಿರುವ ದೂರುಗಳಿಗೆ ಇಲಾಖೆಗಳು ಸೂಕ್ತ ಪರಿಹಾರ ನೀಡಬೇಕು- ಪರಿಶಿಷ್ಟ ಜಾತಿ, ಪಂಗಡಗಳ ಆಯೋಗದ ಅಧ್ಯಕ್ಷ
ಕಾಸರಗೋಡು: ಜಿಲ್ಲೆಯಲ್ಲಿ ಆಯೋಗದ ಮುಂದೆ ಬರುವ ದೂರುಗಳ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ತೀರಾ ಕಡಿಮೆ, ಆದರೆ ಕಂದಾಯ ಮತ್ತು ಪೊಲೀಸ್ ಇಲಾಖೆಗಳಿಗೆ ಸಂಬAಧಿಸಿದ ದೂರುಗಳು ಹೆಚ್ಚು ಎಂದು ಕೇರಳ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್ ಹೇಳಿದರು. ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆದ ದೂರು ಪರಿಹಾರ ಅದಾಲತ್ ನಲ್ಲಿ ಅವರು ಈ ಬಗೆ ತಿಳಿಸಿದರು. ಕಳೆದ ಬಾರಿ 2022ರಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆಯೋಗದ ಅದಾಲತ್ ನಡೆಸಲಾಗಿತ್ತು. ಎರಡು ವರ್ಷಗಳ ನಂತರ ಮತ್ತೆ ಜಿಲ್ಲೆಯಲ್ಲಿ ಅದಾಲತ್ ನಡೆಸಲಾಗಿದೆ. ಕಂದಾಯ, ಪೊಲೀಸ್, ಸ್ಥಳೀಯ ಸ್ವಯಂ ಆಡಳಿತ ಇಲಾಖೆ ಹೀಗೆ ವಿವಿಧ ಇಲಾಖೆಗಳಿಗೆ ಸಂಬAಧಿಸಿದ ದೂರುಗಳು ಆಯೋಗಕ್ಕೆ ಲಭಿಸಿವೆ. ಆಯೋಗವು ಮಧ್ಯಪ್ರವೇಶಿಸಿರುವ ದೂರುಗಳಿಗೆ ಪರಿಹಾರ ಕಂಡುಕೊಳ್ಳುವುದು ಆಯಾ ಇಲಾಖೆಗಳಿಗೆ ಬಿಟ್ಟಿದ್ದು, ಅವರು ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷರು ಹೇಳಿದರು.
ಅದಾಲತ್‌ಗೆ 124 ದೂರುಗಳು ಲಭಿಸಿವೆ. ಆಯೋಗದ ಅಧ್ಯಕ್ಷ ಶೇಖರನ್ ಮಿನಿಯೋಡನ್, ಸದಸ್ಯರುಗಳಾದ ಅಡ್ವ. ಸೇತು ನಾರಾಯಣನ್ ಮತ್ತು ಟಿ.ಕೆ.ವಾಸು ದೂರುಗಳನ್ನು ಆಲಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದರು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸಂಬAಧಿಸಿದ ವಿವಿಧ ವಿಷಯಗಳಲ್ಲಿ ಆಯೋಗದ ಮುಂದೆ ಸಲ್ಲಿಸಿದ ಮತ್ತು ವಿಚಾರಣೆಗೆ ಬಾಕಿ ಇರುವ ದೂರುಗಳನ್ನು ದೂರುದಾರರು ಹಾಗೂ ವಿರೋಧ ಪಕ್ಷಗಳು ಸಂಬAಧಪಟ್ಟ ಅಧಿಕಾರಿ ಗಳನ್ನು ಭೇಟಿಯÁಗಿ ಪರಿಹರಿಸ ಲಾಗಿದೆ. ಹೊಸ ದೂರುಗಳನ್ನು ಸ್ವೀಕರಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ದೂರು ಪರಿಹಾರ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ ಕೆ.ಇಂಬಶೇಖರ್, ಉಪ ಜಿಲ್ಲಾಧಿಕಾರಿ ಪ್ರತೀಕ್ ಜೈನ್, ಪೊಲೀಸ್, ಕಂದಾಯ, ಅರಣ್ಯ, ಶಿಕ್ಷಣ, ಪಂಚಾಯತ್, ಆರೋಗ್ಯ, ಸಹಕಾರ, ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದರು.