ಆರಾಧನಾಲಯಗಳಲ್ಲಿ ನಡೆದ ಸರಣಿ ಕಳವಿನ ಹಿಂದೆ ಒಂದೇ ತಂಡವೆಂಬ ಶಂಕೆ

ಕಾಸರಗೋಡು: ವಿದ್ಯಾನಗರ, ಬದಿಯಡ್ಕ, ಮಂಜೇಶ್ವರ ಮತ್ತು ಮೇಲ್ಪರಂಬ ಪೊಲೀಸ್ ಠಾಣೆಗಳ ವ್ಯಾಪ್ತಿಗೊಳಪಟ್ಟ ಪ್ರದೇಶಗಳ ಆರಾಧನಾಲಯಗಳಲ್ಲಿ ಕಳೆದ ಎರಡು ದಿನಗಳಲ್ಲಾಗಿ ನಡೆದ ಸರಣಿ ಕಳವು ಪ್ರಕರಣಗಳು ಒಂದೇ ತಂಡ ನಡೆಸಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಎರಡು ದಿನಗಳಲ್ಲಾಗಿ ಹತ್ತ ರಷ್ಟು ಕಳವು ನಡೆದಿದೆ. ಆರಾಧನಾ ಲಯಗಳ ಹೊರತಾಗಿ ವ್ಯಾಪಾರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಕಳವು  ನಡೆಸುವ ಕುಖ್ಯಾತ ಕಳ್ಳರ ತಂಡದ ಕೈವಾಡ ಇದರ ಹಿಂದೆ ಇದೆಯೆಂದು ಪೊಲೀಸರು ಶಂಕಿಸುತ್ತಿದ್ದಾರೆ.

ಮಂಜೇಶ್ವರದ ವರ್ಕಾಡಿಯಲ್ಲಿ  ಅಕ್ಟೋಬರ್ ೨೮ರಂದು ಇಗರ್ಜಿಯಲ್ಲಿ ನಡೆದ ಕಳವು ಪ್ರಕರಣದಲ್ಲೂ ಇದೇ ತಂಡದ ಕೈವಾಡವಿದೆಯೆಂದೂ ಶಂಕಿಸಲಾಗುತ್ತಿದೆ. ಈ ಪರಿಸರದ ಸಿಸಿ ಟಿವಿಗಳಲ್ಲಿ ಕಳ್ಳರದ್ದೆಂದು ಸಂಶಯಿಸಲಾ ಗುತ್ತಿರುವ ದೃಶ್ಯ ಗೋಚರಿಸಿದರೂ ಅವರು  ಹೆಲ್ಮೆಟ್ ಧರಿಸಿರುವುದರಿಂದ  ಅವರ ಗುರುತು ಹಚ್ಚಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಅದೇ ದಿನದಂದು ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದ ಕಾಣಿಕೆ ಹುಂಡಿ  ಕಳವು ನಡೆದಿತ್ತು.  ಕಳೆದ ಶನಿವಾರ ಮತ್ತು ಆದಿತ್ಯವಾರ ಎಡನೀರು ಶ್ರೀ ವಿಷ್ಣುಮಂಗಲ  ದೇವಸ್ಥಾನ, ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರ, ನೆಲ್ಲಿಕಟ್ಟೆಯ ಶ್ರೀ ನಾರಾಯಣಗುರು ಮಂದಿರ, ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಬಜಲಕರಿಯ ಬಾಲಯೇಸು ಪ್ರಾರ್ಥನಾ ಮಂದಿರ, ಪಾವಳದ ಕೊರಗಜ್ಜಕಟ್ಟೆಯ ಕಾಣಿಕೆಹುಂಡಿ, ಮೂರುಗೋಳಿ ಸಮೀಪದ ಪಾಡಿಯ ಬಶೀರ್ ಎಂಬವರ ಜನರಲ್ ಸ್ಟೋರ್ ಸೇರಿದಂತೆ  ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು ಹತ್ತು ಕಳವು ನಡೆದಿದೆ.  ಕಳವು ಪತ್ತೆಗಾಗಿ  ಪೊಲೀಸ್ ವ್ಯಾಪಕ ಶೋಧ ಆರಂಭಿಸಿದ್ದಾರೆ. ವಾಹ ನದಲ್ಲಿ ಬಂದು ಕಳವು ನಡೆಸುತ್ತಿರುವ ಕಳ್ಳರ ತಂಡ ಇದಾಗಿರಬಹುದೆಂದು ಪೊಲೀಸರು ಶಂಕಿಸುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page