ಆರಿಕ್ಕಾಡಿ ಪಾರೆಸ್ಥಾನ ಪಾರೆ ಶ್ರೀ ಭಗವತೀ ಆಲಿಚಾಮುಂಡಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ
ಕುಂಬಳೆ: ಆರಿಕ್ಕಾಡಿ ಪಾರೆಸ್ಥಾನ ಪಾರೆ ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಮಾರ್ಚ್ ೩೦ರಿಂದ ಎಪ್ರಿಲ್ ೬ರವರೆಗೆ ಜರಗಲಿದೆ.
೩೦ರಂದು ಸಂಜೆ ೪ಕ್ಕೆ ಚಪ್ಪರ ಮುಹೂರ್ತ, ದೀಪ ಪ್ರತಿಷ್ಠೆ, ರಾತ್ರಿ ೧೦ಕ್ಕೆ ಕ್ಷೇತ್ರಕ್ಕೆ ಭಂಡಾರ ಆಗಮನ, ೩೧ರಂದು ಮುಂಜಾನೆ ೪ಕ್ಕೆ ಭಗವತೀ ದರ್ಶನ, ಕೆಂಡಸೇವೆ, ಪ್ರದಕ್ಷಿಣೆ ಬಲಿ, ಬಿಂಬ ದರ್ಶನ, ೫ಕ್ಕೆ ಕೊಡಿ ಏರುವುದು (ಧ್ವಜಾರೋಹಣ), ಸಂಜೆ ೬ರಿಂದ ಪುಳ್ಳಿ ಪೂವಣ್ಣ ದೈವದ ವೆಳ್ಳಾಟ, ರಾತ್ರಿ ೭ರಿಂದ ಪಾರೆಸ್ಥಾನ ಶ್ರೀ ಭಗವತಿ ಮಹಿಳಾ ಭಜನಾ ಸಂಘ, ಇಚ್ಲಂಪಾಡಿ ಶ್ರೀ ಭಗವತೀ ತಿಯಾ ಸಮಿತಿಯಿಂದ ಭಜನೆ, ೯ಕ್ಕೆ ಅಣಙ್ ಭೂತ, ಪುಳ್ಳಿಪೂವಣ್ಣ ದೈವಕೋಲ, ಬಿಲ್ಲಾಪುರತ್ತ್ ಭಗವತಿ, ಎಪ್ರಿಲ್ ೧ರಂದು ಸಂಜೆ ೪ಕ್ಕೆ ಭಗವತೀ ದರ್ಶನ, ಅಡಯಾಳಂ ಚೇರ್ಕಲ್, ೬ರಿಂದ ಕಳತ್ತೂರು ಶ್ರೀ ಮಹಾದೇವ ಭಜನಾಸಂಘದಿಂದ ಭಜನೆ, ರಾತ್ರಿ ೭ಕ್ಕೆ ವೀರಪುತ್ರನ್ ದೈವದ ವೆಳ್ಳಾಟ, ೯ಕ್ಕೆ ಪಳ್ಳಕ್ಕ ನಾಯರ್ ವೆಳ್ಳಾಟ, ಮಲಯಾಂ ಚಾಮುಂಡಿ ದೈವದ ಕುಳಿಚ್ಚಾಟ, ಪಳ್ಳಕ್ಕ ನೈತೀದೈವ, ಪಳ್ಳಕ್ಕ ನಾಯರ್, ಮದಗೇರಿ ದೈವದ ಕೋಲ, ೨ರಂದು ಮೊದಲ ಕಳಿಯಾಟ, ಅಂದು ಬೆಳಿಗ್ಗೆ ೮ಕ್ಕೆ ವೀರಪುತ್ರನ್ ದೈವದ ಕೋಲ, ೧೦ಕ್ಕೆ ಮಲಯಾಂ ಚಾಮುಂಡಿ ದೈವದ ಕೋಲ, ಸಂಜೆ ೪ಕ್ಕೆ ಭಗವತೀ ದರ್ಶನ, ಕೆಂಡಸೇವೆ, ಪುದಿಯ ಭಗವತಿ ತೊಡಙಲ್, ಅಡಯಾಳಂ ಚೇರ್ಕಲ್, ೬ರಿಂದ ಮಲ್ಲಿಕಾ ಹನುಮಾನ್ ನಗರ ಆರಿಕ್ಕಾಡಿ ಇವರಿಂದ ಭಜನೆ, ರಾತ್ರಿ ೭ಕ್ಕೆ ಕರಿವಿಲ್ಲ್ ದೈವದ ವೆಳ್ಳಾಟ, ಕನ್ನಿಕರುಮಗನ್ ದೈವದ ವೆಳ್ಳಾಟ, ವೇಟಕರು ಮಗನ್ ದೈವದ ವೆಳ್ಳಾಟ, ವೀರಪುತ್ರನ್ ದೈವದ ವೆಳ್ಳಾಟ, ಭಗವತೀ ದರ್ಶನ, ಕೆಂಡಸೇವೆ, ಬಿಂಬ ದರ್ಶನ, ಉರುಳು ಸೇವೆ (ಮಡಸ್ಥಾನ), ಪುದಿಯ ಭಗವತೀ ದೈವದ ಕುಳಿಚ್ಚಾಟ, ಮಲಯಾಂ ಚಾಮುಂಡಿ ದೈವದ ತೋಟ್ಟಂ, ರಾತ್ರಿ ೮ರಿಂದ ಶ್ರೀ ನಾರಾಯಣಗುರು ವನಿತಾ ಸ್ವ-ಸಹಾಯ ಸಂಘ ಆರಿಕ್ಕಾಡಿ ಇವರ ನೇತೃತ್ವದಲ್ಲಿ ನೃತ್ಯ ಕಾರ್ಯಕ್ರಮ ನಡೆಯಲಿದೆ.
೩ರಂದು ನಡು ಕಳಿಯಾಟ. ಅಂದು ಬೆಳಿಗ್ಗೆ ೮ಕ್ಕೆ ಕನ್ನಿಕರುಮಗನ್, ಕರಿವಿಲ್ಲು ದೈವದ ಕೋಲ, ೧೦ಕ್ಕೆ ವೀರಪುತ್ರನ್ ದೈವದ ಕೋಲ, ಸಂಜೆ ೩ಕ್ಕೆ ವೇಟಕರು ಮಗನ್, ಮಲೆಯಾಂ ಚಾಮುಂಡಿ ದೈವದ ಕೋಲ, ೬ಕ್ಕೆ ಕಾರ್ಳೆ ಶ್ರೀ ಕಾಳಿಕಾಂಬಾ ದೇವಸ್ಥಾನದವರಿಂದ ಭಜನೆ, ರಾತ್ರಿ ೭ರಿಂದ ಮಧುರ ಬಾಲಗೋಕುಲ ಶ್ರೀನಗರ ಕಿದೂರು ಅವರಿಂದ ಭಜನೆ, ೮ರಿಂದ ಕಾರ್ಲೆ ಊರ್ಯ ವತಿಯಿಂದ ಹುಲ್ಪೆ ಸಮರ್ಪಣೆ, ೯ರಿಂದ ತಿರುವಾದಿರ ಕಳಿ ಮತ್ತು ಕೈಕೊಟ್ಟಿ ಕಳಿ, ೪ರಂದು ಬೆಳಿಗ್ಗೆ ೫.೩೦ಕ್ಕೆ ಪೀಯಾಯಿ, ೬ಕ್ಕೆ ಆಲಿಭೂತ, ೧೦ಕ್ಕೆ ಭಗವತೀ ದರ್ಶನ, ಕೆಂಡಸೇವೆ, ಬಲಿ, ಬಿಂಬ ದರ್ಶನ, ಪುದಿಯ ಭಗವತೀ ದೈವ, ಕಲಶಪ್ರದಕ್ಷಿಣೆ, ವೀರಕಾಳಿ ದೈವದ ತೊಡಙಲ್, ಸಂಜೆ ೫ಕ್ಕೆ ಕಡೆಯಾಂ ತಿರ್ಮಲ, ಬಬ್ಬರ್ಯ ದೈವ, ೬ರಿಂದ ಶ್ರೀ ಮಹಾದೇವ ಶಾಸ್ತಾ ಭಜನಾ ಸಂಘ ಕಿದೂರು ಅವರಿಂದ ಭಜನೆ, ರಾತ್ರಿ ೭ಕ್ಕೆ ವೀರಪುತ್ರನ್ ದೈವದ ವೆಳ್ಳಾಟ, ೮ರಿಂದ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ, ೯ರಿಂದ ವೇಟಕರು ಮಗನ್ ದೈವದ ವೆಳ್ಳಾಟ, ಭಗವತೀ ದರ್ಶನ, ಕೆಂಡಸೇವೆ, ಬಿಂಬ ದರ್ಶನ, ಉರುಳು ಸೇವೆ, ವೀರಕಾಳಿ ದೈವದ ತೋಟ್ಟಂ, ಮಲೆಯಾಂಚಾಮುಂಡಿ ದೈವದ ಕುಳಿಚ್ಚಾಟ, ೧೦ರಿಂದ ನಾಲ್ಕು ಊರ್ಯ ನೂರು ವಿಲ್ಲು ಮಕ್ಕಳಿಂದ ಕುಣಿತ ಭಜನೆ, ೧೧ಕ್ಕೆ ವೀರಪುತ್ರನ್ ದೈವ ಕೋಲ, ೫ರಂದು ಬೆಳಿಗ್ಗೆ ೬ಕ್ಕೆ ಪೀಯಾಯಿ, ೬.೩೦ಕ್ಕೆ ಆಲಿ ಭೂತ, ೮ಕ್ಕೆ ಮಲಯಾಂ ಚಾಮುಂಡಿ ದೈವ ಕೋಲ, ೯ಕ್ಕೆ ವೇಟಕರುಮಗನ್ ದೈವಕೋಲ, ೧೧.೩೦ಕ್ಕೆ ಭಗವತೀ ದರ್ಶನ, ಕೆಂಡಸೇವೆ, ವೀರ ಕಾಳಿ ದೈವದ ಕೋಲ, ಬಿಂಬ ದರ್ಶನ, ಕಲಶ ಪ್ರದಕ್ಷಿಣೆ, ಪಾಡಾರ್ ಕುಳಙರ ಭಗವತೀ ತೊಡಙಲ್, ಸಂಜೆ ೬ರಿಂದ ಪಾಡಾಂಗರ ಭಗವತೀ ಭಜನಾ ಸಂಘ ಆರಿಕ್ಕಾಡಿ ಅವರಿಂದ ಭಜನೆ, ರಾತ್ರಿ ೮ಕ್ಕೆ ವೀರಪುತ್ರನ್ ದೈವದ ವೆಳ್ಳಾಟ, ಭಗವತೀ ದರ್ಶನ, ಕೆಂಡಸೇವೆ, ಬಿಂಬ ದರ್ಶನ, ಉರುಳು ಸೇವೆ, ೧೦ರಿಂದ ಪಾಡಾರ್‌ಕುಳಙರ ಭಗವತೀ ಕುಳಿಚ್ಚಾಟ, ಮಲೆಯಾಂ ಚಾಮುಂಡಿ ದೈವ ಕುಳಿಚ್ಚಾಟ, ೧೧ಕ್ಕೆ ನೂರುವಿಲ್ಲು ಕುರಿಕ್ಕಲ್ ದೈವ ಕೋಲ, ೬ರಂದು ಬೆಳಿಗ್ಗೆ ೬ಕ್ಕೆ ಪೀಯಾಯಿ, ೬.೩೦ಕ್ಕೆ ಆಲಿ ಭೂತ, ೮ಕ್ಕೆ ಮಲಯಾಂ ಚಾಮುಂಡಿ ದೈವಕೋಲ, ೧೦ಕ್ಕೆ ವೀರ ಪುತ್ರನ್ ದೈವ ಕೋಲ, ಸಂಜೆ ೫ಕ್ಕೆ ಭಗವತೀ ದರ್ಶನ, ಕೆಂಡಸೇವೆ, ಬಿಂಬದರ್ಶನ, ಪಾಡಾರ್‌ಕುಳಙರ ಭಗವತಿ (ಪೂಮಾಡಿ), ಮಂತ್ರಮೂರ್ತಿ, ಆಲಿಭೂತ, ಕಲಶ ಪ್ರದಕ್ಷಿಣೆ, ೬.೩೦ಕ್ಕೆ ಧ್ವಜಾವರೋಹಣ, ರಾತ್ರಿ ೧೦ಕ್ಕೆ ಉತ್ಸವಮೂರ್ತಿ, ಧ್ವಜ, ತಿರುವಾಯುಧ, ಛತ್ರ, ಚಾಮರಗಳೊಂದಿಗೆ ಭಂಡಾರ ನಿರ್ಗಮನಗೊಳ್ಳಲಿದೆ. ಉತ್ಸವ ದಿನಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಅನ್ನ ಸಂತರ್ಪಣೆ ನಡೆಯಲಿರುವುದು.