ಆರೀಫ್ ಮೊಹಮ್ಮದ್ ಖಾನ್ ಬಿಹಾರಕ್ಕೆ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಕೇರಳದ ನೂತನ ರಾಜ್ಯಪಾಲ
ತಿರುವನಂತಪುರ: ನಿಗದಿತ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಕೇರಳ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಆರೀಫ್ ಮೊಹಮ್ಮದ್ ಖಾನ್‌ರನ್ನು ಬಿಹಾರದ ನೂತನ ರಾಜ್ಯಪಾಲರಾಗಿ ನೇಮಿಸಲಾಗಿದೆ.
ಬಿಹಾರದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್‌ರನ್ನು ಕೇರಳದ ಹೊಸ ರಾಜ್ಯಪಾಲರನ್ನಾಗಿ ನೇಮಿಸಲಾ ಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕೇಂದ್ರ ಸರಕಾರದ ಶಿಫಾರಸ್ಸಿನ ಮೇರೆಗೆ ಕೇರಳ ಸೇರಿದಂತೆ ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಹೊಸದಾಗಿ ಕೇರಳ ರಾಜ್ಯಪಾಲ ರನ್ನಾಗಿ ನೇಮಿಸಲಾಗಿರುವ ಅರ್ಲೇಕರ್ ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿಧಾನಸಭಾ ಅಧಕ್ಷರೂ ಆಗಿದ್ದಾರೆ. ಆರೀಫ್ ಮೊಹಮ್ಮದ್‌ರ ನಿಗದಿತ ಅಧಿಕಾರ ಅವಧಿ ಕಳೆದ ಸೆಪ್ಟಂಬರ್ ತಿಂಗಳಲ್ಲಿ ಕೊನೆಗೊಂಡಿತ್ತು. ನಂತರ ಈತನಕ ಅವರನ್ನು ಆ ಸ್ಥಾನದಲ್ಲಿ ಮುಂದುವರಿಸಲಾಗಿತ್ತು.