ಆರ್ಥಿಕ ವ್ಯವಹಾರ :ಎರಡು ಕುಟುಂಬಗಳ ಮಧ್ಯೆಗಿನ ಘರ್ಷಣೆಯಲ್ಲಿ ೮ ಮಂದಿಗೆ ಗಾಯ
ಹೊಸದುರ್ಗ: ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ೮ ಮಂದಿ ಗಾಯಗೊಂಡರು. ಘಟನೆಯಲ್ಲಿ ೧೩ ಮಂದಿ ವಿರುದ್ಧ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದರು. ಹೊಸದುರ್ಗ ಪುದಿಯವಳಪ್ಪ್ ಪಳ್ಳಿ ಕ್ವಾರ್ಟರ್ಸ್ನಲ್ಲಿ ವಾಸಿಸುವ ಕುಶಾಲನಗರದ ಫೈಸಲ್ ಮಂಜಿಲ್ನ ಮೊಹಮ್ಮದ್ ಶರೀಫ್ರ ಪತ್ನಿ ಎಸ್.ಕೆ. ಶಮ್ನ (೩೭), ಸಹೋದರರಾದ ಸಾಬಿತ್ (೧೬), ಸರ್ಫಾದ್ (೧೮) ಎಂಬಿವರಿಗೂ, ಚಿತ್ತಾರಿ ಮುಟ್ಟುಂದಲ ಅಲ್ಫಲ ವಿಲ್ಲಾದ ಎಂ.ಸಿ. ಆಯಿಶ (೫೦), ಪತಿ ಎಂ. ಮೊಯ್ದು (೫೫), ಮೊಯ್ದುರ ಸಹೋದರರಾದ ಸುಬೈರ್ (೩೫), ಹಮೀದ್ (೩೮), ಅಳಿಯ ಸಲೀಂ (೩೫) ಎಂಬಿವರು ಗಾಯಗೊಂಡವರಾಗಿದ್ದಾರೆ. ಶಬ್ನರ ಪತಿ ಹಾಗೂ ಮೊಯ್ದು ಮಧ್ಯೆ ಆರ್ಥಿಕ ವ್ಯವಹಾರ ಇತ್ತೆನ್ನಲಾಗಿದೆ. ಇದು ಘಟನೆಗೆ ಕಾರಣ. ಆಯಿಶಾರ ದೂರಿನಂತೆ ಶಬ್ನಾ ಸರ್ಫಾತ್ ಸಹಿತ ಗುರುತುಹಚ್ಚಬಹುದಾದ ಇತರ ೫ ಮಂದಿ ವಿರುದ್ಧ ಹಾಗೂ ಶಬ್ನಾರ ದೂರಿನಂತೆ ಮೊಯ್ದು, ಆಯಿಶ, ಮಿಸ್ರಿಯ, ಹಮೀದ್, ಸಲೀಂ, ಸುಬೈರ್ ಎಂಬಿವರ ವಿರುದ್ಧವೂ ಹೊಸದುರ್ಗ ಪೊಲೀಸರು ಕೇಸುದಾಖಲಿಸಿದ್ದಾರೆ.