ಆರ್ಯ ಸಮುದಾಯ ಸಂಘ ಮಹಾಸಭೆ
ಮುಳ್ಳೇರಿಯ: ಆರ್ಯ ಸಮುದಾಯ ಸಂಘ ಕಾಸರಗೋಡು ಇದರ ಮಹಾಸಭೆ ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆಯಿತು. ಆರ್ಯ -ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಅಧ್ಯಕ್ಷ ವಾಮನ್ ರಾವ್ ಮುಳ್ಳಂಗೋಡು ಉದ್ಘಾಟಿಸಿದರು. ಆರ್ಯ ಸಮುದಾಯ ಸಂಘದ ಅಧ್ಯಕ್ಷ ಗಿರಿಧರ ರಾವ್ ಚೊಟ್ಟೆ ಅಧ್ಯಕ್ಷತೆ ವಹಿಸಿದ್ದರು. ಆರ್ಯ -ಮರಾಠ ಸಮಾಜ ಸಂಘದ ಗೌರವಾಧ್ಯಕ್ಷೆ ಪ್ರೇಮಲತಾ.ವೈ.ರಾವ್, ಕಾರ್ಯದರ್ಶಿ ಪ್ರದೀಪ್‌ಚಂದ್ರ ಮೆಟ್ಟಿಗೆಕಲ್ಲು ಉಪಸ್ಥಿತರಿದ್ದರು. ಉಪನ್ಯಾಸಕಿ ಡಾ.ಮೀನಾಕ್ಷಿ ರಾಮಚಂದ್ರ ಮಂಗಳೂರು ಇವರು ಉಪನ್ಯಾಸ ನೀಡಿದರು.ಆರ್ಯ ಸಮುದಾಯ ಸಂಘದ ಕಾರ್ಯದರ್ಶಿ ಶ್ರೀಧರ ರಾವ್ ಪಾಟೀಲ್ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಕಾಶ. ಎಂ. ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಕೃಷ್ಣೋಜಿ ಮಾಸ್ತರ್ ಸಂಘದ ಕಾರ್ಯಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಯತೀಶ್ ಕುಮಾರ್ ಪಾಟೀಲ್ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನೂತನ ಅಧ್ಯಕ್ಷರಾಗಿ ಗಿರಿಧರ ರಾವ್ ಚೊಟ್ಟೆ, ಉಪಾಧ್ಯಕ್ಷ ರಾಗಿ ಪ್ರಮೋದ್ ಕುಮಾರ್ ಪಿಲಿ ಕುಂಜೆ, ರೇಷ್ಮ ಗುರುರಾಜ್ ಅಡೂರು, ಕಾರ್ಯದರ್ಶಿಯಾಗಿ ರಾಜೇಶ್ ಎಡನೀರು, ಜೊತೆಕಾರ್ಯದರ್ಶಿಯಾಗಿ ರತ್ನಾಕರ ರಾವ್ ಆದೂರು ಮತ್ತು ಹೇಮಲತಾ ಕಾಸರಗೋಡು, ಕೋಶಾಧಿಕಾರಿಯಾಗಿ ಪ್ರಕಾಶ. ಎಂ. ಕುಂಟಾರು ಅವರನ್ನು ಆರಿಸಲಾಯಿತು. ಉಪಾಧ್ಯಕ್ಷ ಪ್ರಮೋದ್ ಕುಮಾರ್ ಪಿಲಿಕುಂಜೆ ಸ್ವಾಗತಿಸಿ, ಜೊತೆ ಕಾರ್ಯ ದರ್ಶಿ ರತ್ನಾಕರ ರಾವ್ ಆದೂರು ವಂದಿಸಿದರು. ಜೊತೆ ಕಾರ್ಯದರ್ಶಿ ಗಾಯತ್ರಿ ಅಡೂರು ನಿರೂಪಿಸಿದರು.