ಆಶಾ ಕಾರ್ಯಕರ್ತೆಯರನ್ನು ಬೆಂಬಲಿಸಿ ಬಿಜೆಪಿ ರ‍್ಯಾಲಿ ನಾಳೆ
ಕಾಸರಗೋಡು: ವೇತನ ಸೌಲಭ್ಯ ಹೆಚ್ಚಿಸಬೇಕೆಂಬ ಬೇಡಿಕೆ ಯೊಂದಿಗೆ ಕಳೆದ ನಾಲ್ಕು ವಾರಗ ಳಿಂದ ಸೆಕ್ರೆಟರಿಯೇಟ್ ಮುಂದೆ ಚಳ ವಳಿ ನಡೆಸುತ್ತಿರುವ ಆಶಾ ಕಾರ್ಯ ಕರ್ತರಿಗೆ ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಾಳೆ ಸಂಜೆ 3 ಗಂಟೆಗೆ ಕಾಸರಗೋಡು ನಗರ ದಲ್ಲಿ ರ‍್ಯಾಲಿ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ.
ಕರಂದಕ್ಕಾಡ್ ಬಿಜೆಪಿ ಟೌನ್ ಕಚೇರಿ ಪರಿಸರದಿಂದ ಆರಂಭ ಗೊಳ್ಳುವ ರ‍್ಯಾಲಿ ಏರ್‌ಲೈನ್ಸ್ ರಸ್ತೆ, ಹಳೆ ಬಸ್ ನಿಲ್ದಾಣ ಮೂಲಕ ಸಾಗಿ ಹೊಸ ಬಸ್ ನಿಲ್ದಾಣಕ್ಕೆ ತಲುಪಲಿದೆ. ಬಳಿಕ ಅಲ್ಲಿ ನಡೆಯುವ ಸಾರ್ವಜನಿಕ ಸಭಯನ್ನು ಬಿಜೆಪಿ ಮಾಜಿ ರಾಜ್ಯ ಅಧ್ಯಕ್ಷ ಸಿ.ಕೆ. ಪದ್ಮನಾಭನ್ ಉದ್ಘಾಟಿಸುವರು.