ಆಸ್ಪತ್ರೆಗಿರುವ ಯಾತ್ರೆ ಮಧ್ಯೆ ಆಂಬುಲೆನ್ಸ್‌ನಲ್ಲಿ ಯುವತಿಗೆ ಸುಖಪ್ರಸವ: ತಾಯಿ, ಮಗು ಆಸ್ಪತ್ರೆಯಲ್ಲಿ
ಕಾಸರಗೋಡು: ಆಸ್ಪತ್ರೆಗಿರುವ ಪ್ರಯಾಣ ಮಧ್ಯೆ 108 ಆಂಬುಲೆನ್ಸ್‌ನೊಳಗೆ ಯುವತಿಗೆ ಸುಖ ಪ್ರಸವ ನಡೆದಿದೆ. ತಾಯಿ ಹಾಗೂ ಮಗುವಿಗೆ ಕನಿವ್ ೧೦೮ ಆಂಬುಲೆನ್ಸ್‌ನ ನೌಕರರು ರಕ್ಷಕರಾಗಿದ್ದಾರೆ. ವೆಳ್ಳೆರಿಕುಂಡ್ ರಾಜಪುರಂ ಮಾಲಕ್ಕಲ್ ನಿವಾಸಿಯಾದ ೩೫ರ ಹರೆಯದ ಯುವತಿ ಆಂಬುಲೆನ್ಸ್‌ನಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸೋಮವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದ್ದು, ಯುವತಿಗೆ ಹೆರಿಗೆ ನೋವು ಕಂಡು ಬಂದ ಹಿನ್ನೆಲೆಯಲ್ಲಿ ಮನೆ ಮಂದಿ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದರು. ಪ್ರಯಾಣ ಮಧ್ಯೆ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಆಂಬುಲೆನ್ಸ್‌ನ್ನು ಬರಹೇಳಲಾಗಿತ್ತು. ಬಳಿಕ ಆಂಬುಲೆನ್ಸ್ ಚಾಲಕ ಪ್ರಜೀಶ್, ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಶಿಯನ್ ಗ್ರೇಷ್ಮ ಕೆ.ವಿ. ಎಂಬಿವರು ಯುವತಿಯ ಬಳಿ ಬಂದು ಇವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕೊಂಡುಹೋದರು.
ಆಂಬುಲೆನ್ಸ್ ತಾಯೂರ್‌ಗೆ ತಲುಪಿದಾಗ ಯುವತಿ ಆರೋಗ್ಯ ಇನ್ನಷ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಹೆರಿಗೆ ನಡೆಸದೆ ಪ್ರಯಾಣ ಮುಂದುವರಿಸುವುದು ಉಚಿತವಲ್ಲವೆಂದು ಕಂಡುಕೊಂಡ ಹಿನ್ನೆಲೆಯಲ್ಲಿ ಆಂಬುಲೆನ್ಸ್‌ನಲ್ಲೇ ಹೆರಿಗೆಗೆ ಬೇಕಾದ ಸಜ್ಜೀಕರಣಗಳನ್ನು ಸಿದ್ಧಪಡಿಸಲಾಯಿತು. 10.41ರ ವೇಳೆ ಯುವತಿ ಮಗುವಿಗೆ ಜನ್ಮ ನೀಡಿದರು. ಬಳಿಕ ಪ್ರಥಮ ಶುಶ್ರೂಷೆ ನೀಡಿ ಇವರನ್ನು ಆಂಬುಲೆನ್ಸ್‌ನಲ್ಲೇ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ತಲುಪಿಸಲಾಯಿತು. ತಾಯಿ ಹಾಗೂ ಮಗು ಈಗ ಆರೋಗ್ಯದಿಂದಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.