‘ಇಂಡಿಯ’ ಒಕ್ಕೂಟವಲ್ಲ, ಒಂದಾಗಿ ನಿಲ್ಲುವ ಪ್ಲಾಟ್ಫಾಂ ಮಾತ್ರ- ಪ್ರಕಾಶ್ ಕಾರಾಟ್
ಕಾಸರಗೋಡು: ‘ಇಂಡಿಯ’ ಒಂದು ಒಕ್ಕೂಟವಲ್ಲ, ಬದಲಾಗಿ ಒಗ್ಗಟ್ಟಾಗಿ ನಿಲ್ಲುವ ಫ್ಲಾಟ್ ಫಾಂ ಮಾತ್ರವಾಗಿದೆ ಎಂದು ಸಿಪಿಎಂ ಪೊಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಾಟ್ ತಿಳಿಸಿದ್ದಾರೆ.
ಕಾಸರಗೋಡು ಪ್ರೆಸ್ ಕ್ಲಬ್ನ ‘ಜನಸಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ‘ಇಂಡಿಯ’ದ ನೇತಾರನನ್ನು ಚುನಾವಣೆ ಬಳಿಕ ಆರಿಸಲಾಗುವುದು. ಆ ಕುರಿತಾಗಿ ಈಗ ಚರ್ಚೆ ನಡೆಸಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ನ ಅಸಾಮರ್ಥ್ಯ ಎಲ್ಲೆಡೆಗಳಲ್ಲಿ ಕಂಡುಬರುತ್ತಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ರನ್ನು ಬಂಧಿಸಿದಾಗ ‘ಇಂಡಿಯಾ’ ನಡೆಸಿದ ಪ್ರತಿಭಟನೆಯಲ್ಲಿ ಸಿಪಿಎಂ ಹಾಗೂ ಕೇರಳ ಮುಖ್ಯಮಂತ್ರಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟಕ್ಕೆ ನೇತೃತ್ವ ನೀಡುವ ಕಾಂಗ್ರೆಸ್ನ ನೇತಾರ ರಾಹುಲ್ ಗಾಂಧಿ ಕೇರಳ ಮುಖ್ಯಮಂತ್ರಿಯನ್ನು ಬಂಧಿಸದಿರಲು ಕಾರಣವೇನೆಂದು ಪ್ರಶ್ನಿಸಿದ್ದಾರೆ. ಅದರ ಅಗತ್ಯವೇನೆಂದು ತಿಳಿಯುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಾನ ಹೋರಾಟ ಹೇಗೆ ಸಾಧ್ಯವಿದೆ ಯೆಂದೂ ಅವರು ಪ್ರಶ್ನಿಸಿದರು.
ಕೇರಳದಿಂದ ಸ್ಪರ್ಧಿಸುವ ಎಡರಂಗ ಅಭ್ಯರ್ಥಿಗಳು ಭಾರೀ ಬಹುಮತಗ ಳೊಂದಿಗೆ ಗೆಲುವು ಸಾಧಿಸುವರು ಎಂದೂ ಪ್ರಕಾಶ್ ಕಾರಾಟ್ ತಿಳಿಸಿದ್ದಾರೆ. ಕೇರಳದಲ್ಲಿ ನೂರಾರು ಸಹಕಾರಿ ಬ್ಯಾಂಕ್ಗಳು, ಸಂಸ್ಥೆಗಳಿವೆ. ಕರುವನ್ನೂರು ಸಹಕಾರಿ ಬ್ಯಾಂಕ್ ಅವುಗಳಲ್ಲೊಂದಾಗಿದೆ. ಅಲ್ಲಿ ಉಂಟಾದ ವಿವಾದದ ಹೆಸರಲ್ಲಿ ಎಲ್ಲಾ ಸಹಕಾರಿ ಸಂಸ್ಥೆಗಳಲ್ಲಿ ವಿಮರ್ಶಿಸು ವುದರಲ್ಲಿ ಅರ್ಥವಿಲ್ಲವೆಂದೂ ಅವರು ತಿಳಿಸಿದ್ದಾರೆ.