ಇಂದು ಮಹಾಶಿವರಾತ್ರಿ ಕ್ಷೇತ್ರಗಳಲ್ಲಿ ಭಕ್ತರ ಸಂದಣಿ
ಕಾಸರಗೋಡು: ಇಂದು ಮಹಾ ಶಿವರಾತ್ರಿ ಹಬ್ಬವನ್ನು ನಾಡಿನಾದ್ಯಂತ ಭಕ್ತಿಪೂರ್ವಕ ಆಚರಿಸಲಾಗುತ್ತಿದೆ. ಇದರಂಗವಾಗಿ ಶಿವಕ್ಷೇತ್ರಗಳಲ್ಲಿ ವಿವಿಧ ಕಾರ್ಯ ಕ್ರಮಗಳು ಜರಗುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಗಳಿಗೆ ತಲುಪುತ್ತಿದ್ದಾರೆ. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರದಲ್ಲಿ ಇಂದು ಬೆಳಿಗ್ಗೆ ಉಷಃಪೂಜೆ ಭಜನಾ ಸಂಕೀರ್ತನೆ, ನವಕಾಭಿಷೇಕ ನಡೆಯಿತು. ಮಧ್ಯಾಹ್ನ ೧೨ಕ್ಕೆ ಪೂಜೆ, ಸಂಜೆ ೬ಕ್ಕೆ ಶಿವಪಂಚಾಕ್ಷರಿ ಜಪ, ೭ಕ್ಕೆ ಪೂಜೆ, ಉತ್ಸವ ಬಲಿ ನಡೆಯಲಿರುವುದು.