ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆ ವಾರ್ಷಿಕೋತ್ಸವ ನಾಳೆ
ಕುಂಬಳೆ: ಕಳತ್ತೂರು ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯ ವಾರ್ಷಿ ಕೋತ್ಸವ ಹಾಗೂ ಈ ವರ್ಷ ಸೇವೆ ಯಿಂದ ನಿವೃತ್ತರಾಗಲಿರುವ ಮುಖ್ಯೋ ಪಾಧ್ಯಾಯ ರಾಧಾಕೃಷ್ಣ ತುಂಗ ಕೆ.ಎಸ್. ಅವರಿಗೆ ಸನ್ಮಾನ ಸಮಾರಂಭ ನಾಳೆ ಶಾಲೆಯ ಅಮೃತಶ್ರೀ ಸಭಾಂಗಣದಲ್ಲಿ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಶಾಲಾ ವ್ಯವಸ್ಥಾಪಕ ಎಂ. ಗಣೇಶ್ ರಾವ್ ಧ್ವಜಾರೋಹಣ ನಡೆಸುವರು. 10ರಿಂದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 11.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಕುಂಬಳೆ ಪಂ. ಸದಸ್ಯೆ ಪುಷ್ಪಲತಾ ಶೆಟ್ಟಿ ಕಾಜೂರು ಅಧ್ಯಕ್ಷತೆ ವಹಿಸುವರು. ಪಂ. ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ಉದ್ಘಾಟಿಸುವರು. ಉದ್ಯಮಿ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು, ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ ಎಂ., ಕುಂಬಳೆ ಬಿಆರ್‌ಸಿ ಬಿಪಿಸಿ ಜಯರಾಮ್ ಜೆ. ಅತಿಥಿಗಳಾಗಿರು ವರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತುಂಗ ಕೆ.ಎಸ್. ಅವರನ್ನು ಸನ್ಮಾನಿ ಸಲಾಗುವುದು. ಹಲವರು ಉಪಸ್ಥಿತ ರಿರುವರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.