ಇಬ್ಬರು ಯುವಕರು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಯುವಕರಿ ಬ್ಬರು ರೈಲು ಢಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಪಳ್ಳಂ ರೈಲ್ವೇ ಅಂಡರ್ ಪಾಸ್‌ನ ಮೇಲ್ಗಡೆಯ ರೈಲು ಹಳಿಯಲ್ಲಿ ಯುವಕರಿಬ್ಬರು ಇಂದು ಮುಂಜಾನೆ ಸುಮಾರು ೫.೩೦ರ ವೇಳೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಗೂಡ್ಸ್ ರೈಲುಗಾಡಿ ಢಿಕ್ಕಿ ಹೊಡೆದ ಇವರು ಸಾವನ್ನಪ್ಪಿರಬಹು ದೆಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ರೈಲು ಹಳಿ ಬಳಿ ಇಯರ್ ಫೋನ್ ಬಳಸಿ ಮೊಬೈಲ್ ಫೋನ್ ವೀಕ್ಷಿಸುತ್ತಿದ್ದ ವೇಳೆ ಅವರಿಗೆ ರೈಲು ಢಿಕ್ಕಿ ಹೊಡೆದಿರಬಹುದೆಂದು ಹೇಳಲಾಗುತ್ತಿದೆ. ಮೃತದೇಹ ಪತ್ತೆಯಾದ ಸ್ಥಳದಲ್ಲಿ ಹಲವು ಮೊಬೈಲ್ ಫೋನ್‌ಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಸುದ್ದಿ ತಿಳಿದ ಕಾಸರಗೋಡು ಪೊಲೀಸರು ಮತ್ತು ರೈಲ್ವೇ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ. ಮೃತದೇಹಗಳನ್ನು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿ ಮಹಜರು ನಡೆಸಲಾಗಿದೆ.
ಈಮಧ್ಯೆ ನಗರದ ಕೋಟೆ ರಸ್ತೆಯ ಕರಿಪ್ಪೊಡಿಯ ಕ್ವಾರ್ಟ ರ್ಸ್‌ವೊಂದರಲ್ಲಿ ವಾಸಿಸುತ್ತಿರುವ ತಮಿಳುನಾಡು ವಲಸೆ ಕಾರ್ಮಿಕರಾದ ಗಣೇಶ್ ಮತ್ತು ಬಾಲಕೃಷ್ಣನ್ ಎಂಬವರ ಮೊಬೈಲ್ ಫೋನ್‌ಗಳನ್ನು ನಿನ್ನೆ ರಾತ್ರಿ ಆ ಕ್ವಾರ್ಟರ್ಸ್‌ನ ಕಿಟಿಕಿ ಬಳಿಯಿಂದ ಯಾರೋ ಕಳವುಗೈದಿದ್ದರು. ಆ ಬಗ್ಗೆ ಅವರು ಕಾಸರಗೋಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆ ವೇಳೆಯಲ್ಲೇ ಪಳ್ಳಂ ರೈಲು ಹಳಿ ಬಳಿ ಯುವಕರಿಬ್ಬರು ರೈಲು ಢಿಕ್ಕಿ ಹೊಡೆದ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕಳವುಗೈಯ್ಯಲಾದ ತಮಿಳು ವಲಸೆಕಾರ್ಮಿಕರ ಮೊಬೈಲ್ ಫೋನ್‌ಗಳು ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಯುವಕರ ಮೃತದೇಹದ ಬಳಿ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದರ ಕುರಿತಾಗಿ ಸಾವನ್ನಪ್ಪಿದ ಯುವಕರ ಫೋನ್‌ಗಳೂ ಪತ್ತೆಯಾಗಿವೆ.
ಹೀಗೆ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿದ ಯುವಕರ ಪೈಕಿ ಓರ್ವ ನೆಲ್ಲಿಕಟ್ಟೆ ಚೂರಿಪ್ಪಳ್ಳ ಸಾಲೆತ್ತಡ್ಕದ ಮೊಹಮ್ಮದ್ ಶಹೀರ್ (೧೯) ಎಂದು ಗುರುತಿಸಲಾಗಿದೆ. ಆತ ಕೊನೆಯದಾಗಿ ನಿನ್ನೆ ರಾತ್ರಿ ಯುವತಿಯೋರ್ವೆಗೆ ಈ ಮೊಬೈಲ್‌ನಲ್ಲಿ ಸಂಪರ್ಕಿಸಿ ಮಾತನಾಡಿದ್ದನು. ಆ ನಂಬ್ರವನ್ನು ಬಳಸಿ ಪೊಲೀಸರು ಯುವತಿಯನ್ನು ಸಂಪರ್ಕಿಸಿದಾಗ ತನ್ನನ್ನು ಕರೆದಿರುವ ವ್ಯಕ್ತಿ ನಿಹಾಲ್ ಆಗಿರುವುದಾಗಿ ಆಕೆ ಪೊಲೀಸರಲ್ಲಿ ತಿಳಿಸಿದ್ದಳು. ಅದರಂತೆ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಗುರುತಿಸಲು ಸಾಧ್ಯವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತನ ತಾಯಿ ಇಂದು ಬೆಳಿಗ್ಗೆ ಜನರಲ್ ಆಸ್ಪತ್ರೆಗೆ ಆಗಮಿಸಿ ಮೃತನು ತನ್ನ ಪುತ್ರನಾಗಿರುವುದಾಗಿ ಗುರುತುಹಚ್ಚಿದ್ದಾರೆ.