ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ವಾರ್ಷಿಕ ಆತ್ಮೀಯ ಸಂಗಮ ನಾಳೆಯಿಂದ
ಕುಂಬಳೆ: ಇಮಾಂ ಶಾಫಿ ಇಸ್ಲಾಮಿಕ್ ಅಕಾಡೆಮಿ ವಾರ್ಷಿಕ ಆತ್ಮೀಯ ಸಂಗಮ ನಾಳೆ, 24, 25ರಂದು ಅಕಾಡೆಮಿಯ ಕ್ಯಾಂಪಸ್‌ನಲ್ಲಿ ನಡೆಯಲಿದೆ. ಸಿಯಾರತ್ ಧ್ವಜಾ ರೋಹಣ ಖತ್ಮುಲ್ ಖುಲಾನ್, ಮಜ್ಲೀಸುನ್ನೂರ್, ಧಾರ್ಮಿಕ ಪ್ರವಚನ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ. ನಾಳೆ ಬೆಳಿಗ್ಗೆ 9 ಗಂಟೆಗೆ ಕೆ.ಕೆ. ಮಾಹಿನ್ ಮುಸ್ಲಿಯಾರ್ ಸಿಯಾರತ್‌ಗೆ ನೇತೃತ್ವ ನೀಡುವರು. ಮುಹಮ್ಮದ್ ಶಾಫಿ ಹಾಜಿ ಮೀಪಿರಿ ಧ್ವಜಾರೋಹಣಗೈಯ್ಯುವರು. ಅಪರಾಹ್ನ 2 ಗಂಟೆಗೆ ಪೂರ್ವವಿದ್ಯಾರ್ಥಿ, ಅಧ್ಯಾಪಕರ ಸಂಗಮ ನಡೆಯಲಿದೆ.
ರಾತ್ರಿ 7 ಗಂಟೆಗೆ ಕೆ.ಎಸ್. ಅಲಿ ತಂಙಳ್ ಕುಂಬೋಳ್ ಉದ್ಘಾಟಿಸು ವರು. ಎಂ.ಪಿ. ಮುಹಮ್ಮದ್ ಸಾದಿ ಅಧ್ಯಕ್ಷತೆ ವಹಿಸುವರು. ರಾತ್ರಿ ೮ಕ್ಕೆ ಬುರ್ದಾ ಮಜ್ಲಿಸ್ ನಡೆಯಲಿದೆ. 24ರಂದು ಸಂಜೆ 4 ಗಂಟೆಗೆ ಶಾಸಕ ಎಕೆಎಂ ಅಶ್ರಫ್ ಮಹಲ್ ಪ್ರಸ್ತಾನಿಕ ಉದ್ಘಾಟಿಸುವರು. ಮೂಸ ಹಾಜಿ ಕೊಹಿನೂರು ಅಧ್ಯಕ್ಷತೆ ವಹಿಸುವರು. ಅಬ್ದುಲ್ ಮಜೀದ್ ಬಾಖವಿ ಪ್ರವಚನ ನೀಡುವರು.
ಹಲವರು ಭಾಗವಹಿಸು ವರು. 25ರಂದು ಬೆಳಿಗ್ಗೆ 10 ಗಂಟೆಗೆ ಇತಿಸಾಲ್ ಕುಟುಂಬ ಸಂಗಮ, ಸಮಾರೋಪ ಸಮಾರಂಭ ಜರಗಲಿದ್ದು, ಸಮಸ್ತ ಅಧ್ಯಕ್ಷ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸು ವರು. ಡಾ. ಇಸುದ್ದಿನ್ ಮೊಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸುವರು. ಹಲವರು ಭಾಗವಹಿಸುವರು. ಈ ಬಗ್ಗೆ ಕುಂಬಳೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪದಾಧಿ ಕಾರಿಗಳು ಮಾಹಿತಿ ನೀಡಿದರು.
ಪದಾಧಿಕಾರಿಗಳಾದ ಕೆ.ಎಲ್. ಅಬ್ದುಲ್ ಖಾದಿರ್ ಅಲ್‌ಖಾಸಿಮಿ, ಮೂಸಾ ಹಾಜಿ, ಅಬೂಬಕ್ಕರ್ ಸಾಲೂದ್, ಪಿ.ವಿ. ಸುಬೈರ್, ಅಬ್ದುಲ್ ರಹಿಮಾನ್, ಅಲಿ ದಾರಿಮಿ, ಖಲೀಲ್ ಅಶ್ಶಾಫಿ ಮಾಹಿತಿ ನೀಡಿದರು.