ಇಲಿವಿಷ ಪ್ರಾಶನ ನರ್ಸಿಂಗ್ : ವಿದ್ಯಾರ್ಥಿನಿ ಸಾವು
ಕಾಸರಗೋಡು: ಇಲಿವಿಷಪ್ರಾ ಶನಗೈದು ನರ್ಸಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ನಡೆದಿದೆ. ಹೊಸದುರ್ಗ ಸಮೀಪದ ಮಡಿಕೈ ತಾಯನ್ನೂರು ತೆರಳ ಚಪ್ಪಾರಪುರಯಿಲ್ ದರ್ಶನ (22) ಸಾವನ್ನಪ್ಪಿದ ಯುವತಿಯ ಇವರು ಮಂಗಳೂರಿನ ನರ್ಸಿಂಗ್ ತರಬೇತಿ ಕೇಂದ್ರದಲ್ಲಿ ಅಂತಿಮ ವರ್ಷ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾರೆ. ಅಲ್ಲಿನ ಹಾಸ್ಟೆಲ್‌ನಲ್ಲಿ ಅವರು ವಿಷಪ್ರಾಶನಗೈದಿದ್ದರು. ಬಳಿಕ ಎರ್ನಾಕುಳಂನ ಅಮೃತ ಆಸ್ಪತ್ರೆಯಲ್ಲಿ ದಾಖಲಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾ ಗದೆ ಅವರು ಸಾವನ್ನಪ್ಪಿದರು. ಅಂಬುಜಾಕ್ಷನ್-ಪದ್ಮಿನಿ ದಂಪತಿಯ ಪುತ್ರಿಯಾಗಿರುವ ದರ್ಶನ ಸಹೋದರ ಆದರ್ಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.