ಇಲಿ ವಿಷ ಸೇವಿಸಿದ ವಿದ್ಯಾರ್ಥಿನಿ ಸಾವಿಗೆ ಶರಣು
ಬದಿಯಡ್ಕ: ಯುವಕನಿಂದ ಉಂಟಾದ ನಿರಂತರ ಉಪಟಳ ಹಾಗೂ ಬೆದರಿಕೆಯನ್ನು ಸಹಿಸ ಲಾಗದೆ ಇಲಿ ವಿಷ ಸೇವಿಸಿ ಆತ್ಮ ಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿ ಮೃತ ಪಟ್ಟಳು. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರ ಹತ್ತನೇ ತರಗತಿ ವಿದ್ಯಾರ್ಥಿನಿಯೂ ಕುಂಬ್ಡಾಜೆ ನಿವಾಸಿಯಾದ ಹದಿನಾ ರರ ಹರೆಯದ ಬಾಲಕಿ ದೇರಳಕಟ್ಟೆ ಯ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾಳೆ.
ಕಳೆದ ಮಂಗಳವಾರ ಸಂಜೆ ಬಾಲಕಿ ಮನೆಯೊಳಗೆ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು. ಕೂಡಲೇ ಆಸ್ಪತ್ರೆಗೆ ತಲುಪಿಸಲಾಗಿತ್ತು. ವಿಷಯ ತಿಳಿದು ಬದಿಯಡ್ಕ ಪೊಲೀಸರು ಆಸ್ಪತ್ರೆಗೆ ತಲುಪಿ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದರು. ಅನಂತರ ಪೋಕ್ಸೋ ಕೇಸು ದಾಖಲಿಸಿಕೊಂಡ ಪೊಲೀಸರು ಮೊಗ್ರಾಲ್ ಪುತ್ತೂರು ಕೋಟೆಕುನ್ನುವಿನ ಅನ್ವರ್ (೨೪) ಎಂಬಾತನನ್ನು ಬಂಧಿಸಿದ್ದಾರೆ.
ಸಾಮಾಜಿಕ ತಾಣದ ಮೂಲಕ ಅನ್ವರ್ ಬಾಲಕಿಯನ್ನು ಪರಿಚಯ ಗೊಂಡಿದ್ದನು. ಈ ವಿಷಯ ತಿಳಿದ ಮನೆಯವರು ಬಾಲಕಿಗೆ ಬುದ್ದಿ ಮಾತು ಹೇಳಿದ್ದರು. ಅನಂತರ ಬಾಲಕಿ ಅನ್ವರ್ನೊಂದಿಗೆ ತನಗೆ ಕರೆ ಮಾಡಕೂಡದೆಂದು ತಿಳಿಸಿ ಮೊಬೈಲ್ ನಂಬ್ರವನ್ನು ಬ್ಲೋಕ್ ಮಾಡಿದ್ದಳು. ಆದರೆ ಬಾಲಕಿ ವಿಷ ಸೇವಿಸಿದ ದಿನ ಬೆಳಿಗ್ಗೆ ಅನ್ವರ್ ಆಕೆಯನ್ನು ಹಿಂಬಾಲಿಸಿದ್ದು, ಅಲ್ಲದೆ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿರುವು ದಾಗಿ ಬಾಲಕಿ ನೀಡಿದ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಅಂದು ಸಂಜೆ ಬಾಲಕಿವಿಷ ಸೇವಿಸಿದ್ದಳು. ಘಟನೆಗೆ ಸಂಬಂಧಿಸಿ ಕೇಸು ದಾಖಲಿಸಿದ ಕುರಿತು ತಿಳಿದು ಬೆಂಗಳೂರಿಗೆ ಪರಾರಿಯಾದ ಅನ್ವರ್ನನ್ನು ಅಲ್ಲಿಂದ ಸೆರೆ ಹಿಡಿಯಲಾಗಿದೆ. ಈತ ಈಗ ರಿಮಾಂಡ್ನಲ್ಲಿದ್ದಾನೆ. ಈತನ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪವನ್ನು ಹೊರಿಸಲಾಗಿದೆ.
ಇದೇ ವೇಳೆ ಬಾಲಕಿಗೆ ಉಪಟಳ ನೀಡಲು ಕೆಲವರು ಒತ್ತಾಸೆಗೈದಿರು ವುದಾಗಿ ಆರೋ ಪಿಸಲಾಗಿದೆ. ವಿಷಯ ತಿಳಿದ ಪೊಲೀಸರು ಆ ಯುವಕನ ಮೇಲೆ ನಿಗಾ ಇರಿಸಿದ್ದಾರೆ. ಇದೇ ವೇಳೆ ಬಾಲಕಿಯ ಸಾವು ಶಾಲೆ ಹಾಗೂ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.