ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕಾಸರಗೋಡು: ಇಲಿ ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು. ಮಡಿಕೈ ಚಾಳಕ್ಕಡವ್  ಅಂಬಾಡಿ ನಿಲಯ ನಿವಾಸಿ ಅಶೋಕನ್ -ರಜನಿ ದಂಪತಿ ಪುತ್ರ ಎನ್.ಆರ್. ರಂಜಿತ್ (21) ಮೃತಪಟ್ಟವರು.

ಈ ತಿಂಗಳ ೬ರಂದು ರಂಜಿತ್‌ರನ್ನು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು. ವಿಷ ಹೊಟ್ಟೆಗೆ ಸೇರಿದ ಹಿನ್ನೆಲೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ ಇವರು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣವೇನೆಂದು ಸ್ಪಷ್ಟಗೊಂಡಿಲ್ಲ. ನೀಲೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

You cannot copy contents of this page