ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಫ್ಲೆಕ್ಸ್ ಅಂಗಡಿ ಮಾಲಕ ಮೃತ್ಯು

ಕಾಸರಗೋಡು: ಟ್ಯಾಂಕರ್ ಲಾರಿ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಸಾವನ್ನಪ್ಪಿದ ದಾರುಣ ಘಟನೆ ನಗರದ ಎಂ.ಜಿ ರಸ್ತೆಯಲ್ಲಿ ನಡೆದಿದೆ.

ತಳಂಗರೆ ಬಾಂಗೋಡು ನಿವಾಸಿ ಹನೀಫಾ (55) ಸಾವನ್ನಪ್ಪಿದ ದುರ್ದೈವಿ. ವಿದ್ಯಾನಗರ ಬಿ.ಸಿ ರೋಡ್‌ನಲ್ಲಿರುವ ಫ್ಲೆಕ್ಸ್ ಅಂಗಡಿಯ ಮಾಲಕನಾಗಿರುವ ಹನೀಫಾ ನಿನ್ನೆ ಮಧ್ಯಾಹ್ನ ಸ್ಕೂಟರ್‌ನಲ್ಲಿ ಹೊಸ ಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ  ಭಾರೀ ವಾಹನಗಳ ನಿಬಿಡತೆ ಹೊಂದಿರುವ ಎಂ.ಜಿ ರಸ್ತೆ ಮೂಲಕ ಸಾಗುತ್ತಿದ್ದ ವೇಳೆ ಸ್ಕೂಟರ್ ಟ್ಯಾಂಕರ್ ಲಾರಿಗೆ ಢಿಕ್ಕಿ  ಹೊಡೆದಿತ್ತು. ಈ ವೇಳೆ ಸ್ಕೂಟರ್‌ನಿಂದ ಕೆಳಕ್ಕೆ ಬಿದ್ದ ಹನೀಫಾರ ಕಾಲಿನ ಮೇಲೆ ಲಾರಿಯ ಚಕ್ರ ಹರಿದು ಅವರು ಗಂಭೀರ ಗಾಯಗೊಂಡಿದ್ದರು. ಅವರನ್ನು ತಕ್ಷಣ  ಜನರಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿ ನಂತರ  ನಗರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬಳಿಕ ಮಂಗಳೂರಿನ  ಆಸ್ಪತ್ರೆಗೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಹನೀಫಾ ಇಂದು ಬೆಳಿಗ್ಗೆ ಸಾವನ್ನಪ್ಪಿದರು.  ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತರು ಪತ್ನಿ ಸಿಬಿರಿಯಾ, ಮಕ್ಕಳಾದ  ಉಸ್ನ ಇಷಾಂ, ಆನಿಯಾ, ಅಸ್ಬ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹನೀಫಾ ಈ ಹಿಂದೆ ಗಲ್ಫ್‌ನಲ್ಲಿ  ದುಡಿಯುತ್ತಿದ್ದರು. ನಂತರ ಊರಿಗೆ ಹಿಂತಿರುಗಿದ ಇವರು ಪಾಲುದಾರಿಕೆಯೊಂದಿಗೆ   ಪೋರ್ ಸೈಟ್ ಸಂಸ್ಥೆ ಆರಂಭಿಸಿದ್ದು,  ನಂತರ  ಅವರು ಸ್ವಂತವಾಗಿ ವಹಿಸಿ ನಡೆಸುತ್ತಿದ್ದರು.

RELATED NEWS

You cannot copy contents of this page