ಈಸ್ಟ್ ಎಳೇರಿ ಪಂಚಾಯತ್ನಿಂದ ಬ್ಯಾಟರಿ ಕಳವು
ಕಾಸರಗೋಡು: ಈಸ್ಟ್ ಎಳೇರಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕಳವು ನಡೆದ ಬಗ್ಗೆ ತಡವಾಗಿ ಬಹಿರಂಗಗೊಂಡಿದೆ. ಯುಪಿಎಸ್ ಬ್ಯಾಟರಿಗಳು ಹಾಗೂ ಹಳೆಯ ಯುಪಿಎಸ್ ಕಳವಿಗೀಡಾಗಿದೆ. 2024 ಎಪ್ರಿಲ್ 25- ಜುಲೈ 8ರ ಮಧ್ಯೆ ಕಳವು ನಡೆದಿರುವುದಾಗಿ ತಿಳಿಸಲಾಗಿದೆ. ಬ್ಯಾಟರಿಗಳನ್ನು ಪಂಚಾಯತ್ ಕಚೇರಿಯ ಕಟ್ಟಡದೊಳಗಿರಿಸಲಾಗಿತ್ತು.
ಪಂಚಾಯತ್ ಕಾರ್ಯದರ್ಶಿ ವಿ.ಆರ್. ಮನೋಜ್ರ ದೂರಿನಂತೆ ಚಿಟ್ಟಾರಿಕ್ಕಲ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳವು ನಡೆದ ಬಗ್ಗೆ ಮಾಜಿ ಪಂಚಾಯತ್ ಅಧ್ಯಕ್ಷರೂ, ಎರಡನೇ ವಾರ್ಡ್ ಸದಸ್ಯರಾದ ಜೇಮ್ಸ್ ಪಂದಮ್ಮಾಕ್ಕಲ್ ಒಂದು ವಾರ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ವಿಜಿಲೆನ್ಸ್ಗೂ ದೂರು ನೀಡಿದ್ದಾರೆ. 40 ಕಿಲೋ ಭಾರದ 20 ಬ್ಯಾಟರಿಗಳು ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಹಳೆಯ ಬ್ಯಾಟರಿಗಳಿಗೆ ಸುಮಾರು 8೦ ಸಾವಿರ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ.