ಉಕ್ಕಿ ಹರಿದ ಶಿರಿಯ ಹೊಳೆ ಉಳುವಾರು, ಬಂಬ್ರಾಣದಲ್ಲಿ ಮನೆಗಳು ಜಲಾವೃತ

ಕುಂಬಳೆ: ನಿನ್ನೆ ತೀವ್ರವಾಗಿ ಸುರಿದ ಮಳೆಯಿಂದ ಕುಂಬಳೆ ಹಾಗೂ ಪರಿಸರ ಪ್ರದೇಶಗಳಲ್ಲೂ ವ್ಯಾಪಕ ಹಾನಿ ಸಂಭವಿಸಿದೆ. ಶಿರಿಯ ಹೊಳೆ ಉಕ್ಕಿ ಹರಿದ ಪರಿಣಾಮ ಉಳುವಾರು, ಬಂಬ್ರಾಣ ಬಯಲು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಬಯಲು ಪ್ರದೇಶಗಳಲ್ಲಿ ತುಂಬಿಕೊಂಡ ನೀರು ಇಲ್ಲಿನ ಮನೆಗಳಿಗೂ ನುಗ್ಗಿದೆ. ಇದರಿಂದ ಮನೆಯಿಂದ ಹೊರಗಿಳಿಯಲು ಕೂಡಾ ಸಾಧ್ಯವಾಗದೆ ಕುಟುಂಬಗಳು ಬಾರೀ ಸಮಸ್ಯೆ ಎದುರಿಸಬೇಕಾಗಿ ಬಂತು. ರಾತ್ರಿ ಬಳಿಕ ಮಳೆ ಕಡಿಮೆಯಾಗಿದ್ದು, ಇದರಿಂದ ಹೆಚ್ಚಿನ ನಾಶನಷ್ಟ ತಪ್ಪಿಹೋಗಿದೆ.

ಕುಂಬಳೆ ಬದ್ರಿಯಾ ನಗರದಲ್ಲಿ ಆಮಿನ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಗೀಡಾಗಿದೆ. ನಿನ್ನೆ ಸುರಿದ ಗಾಳಿ, ಮಳೆ ವೇಳೆ ಮರ ಮನೆ ಮೇಲೆ ಬಿದ್ದಿದೆ.

You cannot copy contents of this page