ಕ್ಲಿನಿಕ್‌ನಲ್ಲಿ ಕುಸಿದು ಬಿದ್ದು ಕಟ್ಟಡ ನಿರ್ಮಾಣ ಕಾರ್ಮಿಕ ಮೃತ್ಯು

ಅಡೂರು: ಎದೆನೋವು ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್‌ಗೆ ತಲುಪಿದ ವ್ಯಕ್ತಿ ಕುಸಿದು ಬಿದ್ದ ಘಟನೆ ಅಡೂರಿನಲ್ಲಿ ಸಂಭವಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮುಳ್ಳೇರಿಯದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅಡೂರು ಮಂಡೆಬೆಟ್ಟು ನಿವಾಸಿ, ಕಟ್ಟಡ ನಿರ್ಮಾಣ ಕಾರ್ಮಿಕ ಬಾಲಕೃಷ್ಣನ್ (48) ಕುಸಿದು ಬಿದ್ದು ನಿಧನ ಹೊಂದಿದವರು. ನಿನ್ನೆ ಮಧ್ಯಾಹ್ನ ಇವರು ಚಿಕಿತ್ಸೆಗಾಗಿ ಅಡೂರಿನ ಖಾಸಗಿ ಕ್ಲಿನಿಕ್‌ಗೆ ತಲುಪಿದ್ದರು. ಅಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಮುಳ್ಳೇರಿಯ ಸಹಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.

ಇವರು ದಿ| ಗೋಪಾಲನ್- ಮಾಧವಿ ದಂಪತಿ ಪುತ್ರನಾಗಿದ್ದು, ಪತ್ನಿ ಸುಜಾತ, ಮಕ್ಕಳಾದ ಶಿಬಿನ್, ಅನನ್ಯ, ಸಹೋದರ ಶ್ರೀಧರ, ಸಹೋದರಿ ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರ ಶ್ರೀಧರ ನೀಡಿದ ದೂರಿನಂತೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page