ಯುವಕನನ್ನು ಅಪಹರಿಸಿ ಹಣ ಎಗರಿಸಿದ ಓರ್ವ ಆರೋಪಿ ಸೆರೆ

ಕಾಸರಗೋಡು: ಯುವಕನನ್ನು ಕಾರಿನಲ್ಲಿ ಅಪಹರಿಸಿ ಬೆದರಿಸಿ ಹಣ ಎಗರಿಸಿದ ಪ್ರಕರಣದ ಆರೋಪಿಗಳ ಲ್ಲೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಚೆಟ್ಟುಂಗುಳಿ ಎಸ್‌ಪಿ ನಗರದ ಸೈನುಲ್ ಆಬೀದ್ (34) ಬಂಧಿತ ಆರೋಪಿ. ಈತನನ್ನು ನ್ಯಾಯಾಲ ಯದ  ನಿರ್ದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿ ಸಲಾಗಿದೆ.

ಆರೋಪಿಯನ್ನು ಸೆರೆಹಿಡಿಯಲೆಂದು ಮೇಲ್ಪರಂಬ ಪೊಲೀಸರು ಆತನ ಮನೆಗೆ  ಹೋದಾಗ ಆತ ಅಲ್ಲಿಂದ ತಪ್ಪಿಸಿ ಕಾರಿನಲ್ಲಿ ಪಲಾಯನಗೈಯ್ಯಲೆತ್ನಿಸಿದ್ದಾನೆ. ಅದನ್ನು ಕಂಡ ಪೊಲೀಸರು ತಕ್ಷಣ ತಮ್ಮ ಜೀಪಿನಲ್ಲಿ ಆ ಕಾರನ್ನು ಹಿಂಬಾಲಿಸಿ ಆತನನ್ನು ಸೆರೆಹಿಡಿಯುವಲ್ಲಿ ಸಫಲರಾದರು.

ಅಗೋಸ್ತ್ 24ರಂದು ರಾತ್ರಿ 9 ಗಂಟೆ ವೇಳೆ ಕಳನಾಡು ಕೋಡಂಕೈ ನಿವಾಸಿ ಕೆ.ಎ. ಮುಹಮ್ಮದ್ ಅನ್‌ಸೀನ್ (19) ಎಂಬಾತನನ್ನು ಕಳನಾಡು ತಾಯಲ್‌ನಿಂದ ಅಕ್ರಮಿಗಳ ತಂಡ ಕಾರಿನಲ್ಲಿ ಅಪಹರಿಸಿ ಕೊಲೆಬೆದರಿಕೆಯೊಡ್ಡಿ ಗೂಗಲ್ ಪೇ ಮೂಲಕ 2೦,೦೦೦ ರೂ. ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೈನುಲ್ ಆಬೀದ್ ನನ್ನು ಬಂಧಿಸಲಾಗಿದೆ.  ಈ ಪ್ರಕರಣದ ಇನ್ನೋರ್ವ ಆರೋಪಿಯನ್ನು ಸೆರೆಹಿಡಿಯಲು ಬಾಕಿ ಇದೆಯೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page