ಓಣಂ ಆಚರಣೆ ವೇಳೆ ಪಾಳು ಬಾವಿಗೆ ಬಿದ್ದು ಗಾಯಗೊಂಡ ವಿದ್ಯಾರ್ಥಿ ಚಿಕಿತ್ಸೆ ಮಧ್ಯೆ ಮೃತ್ಯು

ಕಾಸರಗೋಡು: ಪಾಳು ಬಾವಿಗೆ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಾಲಕ ಮೃತಪಟ್ಟನು. ಕೊಡಕ್ಕಾಡ್ ಆನಿಕ್ಕಾಡಿ ನಿವಾಸಿ ಸನೂಪ್ (14) ಮೃತಪಟ್ಟ ದುರ್ದೈವಿ. ಗುರುವಾರ ರಾತ್ರಿ ಚೆಂಬ್ರಕಾನದಲ್ಲಿ ನಡೆದ ಓಣಂ ಕಾರ್ಯಕ್ರಮದಲ್ಲಿ ಸನೂಪ್ ಹಾಗೂ ಸ್ನೇಹಿತ ಭಾಗವಹಿಸಿದ್ದರು. ಈ ಮಧ್ಯೆ ಸ್ನೇಹಿತರೊಂದಿಗೆ ಮೂತ್ರಶಂಕೆ ಗೆಂದು ಹೋದಾಗ ಸನೂಪ್ ಆವರಣ ಗೋಡೆಯಿಲ್ಲದ ಪಾಳು ಬಾವಿಗೆ ಬಿದ್ದಿ ದ್ದನು. ಕೂಡಲೇ ನಾಗರಿಕರು ರಕ್ಷಿಸಲು ಯತ್ನಿಸಿದರೂ ಬಾಲನನ್ನು ಮೇಲ ಕ್ಕೆತ್ತಲು ಸಾಧ್ಯವಾಗಿರಲಿಲ್ಲ. ಕೊನೆಗೆ ಚೀಮೇನಿಯಿಂದ ಅಗ್ನಿಶಾಮಕದಳ ತಲುಪಿ ಬಾಲಕನನ್ನು ಬಾವಿಯಿಂದ ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಲಾಗಿತ್ತು.

ಸ್ಥಿತಿ ಗಂಭೀರವಾಗಿದ್ದುದರಿಂದ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಸಂಜೆ ಬಾಲಕ ಮೃತಪಟ್ಟನು. ಕೊಡಕ್ಕಾಡ್ ನಿವಾಸಿ ಧನೇಶ್- ಸವಿತ ದಂಪತಿ ಪುತ್ರನಾದ ಸನೂಪ್ ತಿಮಿರಿ ಎಂ.ಕೆ.ಎಸ್. ಹೈಸ್ಕೂಲ್‌ನ ೧೦ನೇ ತರಗತಿ ವಿದ್ಯಾರ್ಥಿಯಾಗಿದ್ದನು. ಬಾಲಸಂಘಂ ಆನಿಕ್ಕೋಡ್ ಯೂನಿಟ್ ಸೆಕ್ರೆಟರಿಯೂ ಆಗಿದ್ದನು.

You cannot copy contents of this page