ಉಣ್ಣಿತ್ತಾನ್‌ರಿಂದ ಎಣ್ಮಕಜೆ ಪಂ. ಪರ್ಯಟನೆ

ಪೆರ್ಲ: ಕಾಸರಗೋಡು ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ರಾಜ್‌ಮೋಹನ್ ಉಣ್ಣಿತ್ತಾನ್ ನಿನ್ನೆ ಎಣ್ಮಕಜೆ ಪಂಚಾಯತ್‌ನ ವಿವಿಧ ಕಡೆಗಳಲ್ಲಿ ಪ್ರಚಾರ ನಡೆಸಿದ್ದು, ಈ ವೇಳೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ನೀಡಿದರು.

ಪಳ್ಳಂನಿಂದ ಆರಂಭಗೊಂಡ ಪ್ರಚಾರ ಪರ್ಯಟನೆ ಸಭೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್, ಎಐಸಿಸಿ ಕಾರ್ಯದರ್ಶಿ ಐ. ಸುಬ್ಬಯ್ಯ ರೈ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್., ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಗಾಂಭೀರ್, ಯುಡಿಎಫ್ ಚುನಾವಣಾ ಪಂ. ಸಮಿತಿ ಅಧ್ಯಕ್ಷ ರವೀಂದ್ರನಾಥ ನಾಯ್ಕ್, ಸಂಚಾಲಕ ಅಬೂಬಕ್ಕರ್, ಎ.ಕೆ. ಶರೀಫ್, ಅಸೀಸ್ ಮರಿಕ್ಕೆ, ಮಂಜುನಾಥ ಆಳ್ವ ಮಡ್ವ, ಸಿದ್ದಿಕ್ ಒಳಮೊಗರು ಭಾಗವಹಿಸಿದರು. ಬಳಿಕ ಬಣ್ಪುತ್ತಡ್ಕ, ಕಜಂಪಾಡಿ, ಕಾಟುಕುಕ್ಕೆ, ಚವರ್‌ಕ್ಕಾಡ್, ನಲ್ಕ, ಪೆರ್ಲ ಪೇಟೆ, ಬೇಂಗಪದವು, ಬೆದ್ರಂಪಳ್ಳ ಮೊದಲಾದೆಡೆ ಸಂಚರಿಸಿ ಶೇಣಿಯಲ್ಲಿ ಸಮಾಪ್ತಿ ಗೊಂಡಿತು.

RELATED NEWS

You cannot copy contents of this page