ಉತ್ತರ ಮಲಬಾರ್ ಸಹಿತ ಕೇರಳದಲ್ಲಿ ಪೋಪುಲರ್ ಫ್ರಂಟ್‌ನ ಸ್ಲೀಪಿಂಗ್ ಸೆಲ್ ಸಕ್ರಿಯ-ವರದಿ
ಕಣ್ಣೂರು: ಉತ್ತರ ಮಲ ಬಾರ್ ಸಹಿತ ರಾಜ್ಯದ ಕೆಲವು ಭಾಗಗಳಲ್ಲಿ ನಿಷೇಧಿತ ಪೋಪುಲರ್ ಫ್ರಂಟ್ ಸ್ಲೀಪಿಂಗ್ ಸೆಲ್‌ಗಳು ಈಗಲೂ ಸಕ್ರಿಯವಾಗಿವೆಯೆಂದು ಪೊಲೀಸ್ ಗುಪ್ತಚರ ವಿಭಾಗ ಸ್ಪೆಶಲ್ ಬ್ರಾಂಚ್ ವರದಿಮಾಡಿದೆ. ನಿಷೇಧಕ್ಕಿಂತ ಮೊದಲು ಶಕ್ತಿ ಕೇಂದ್ರಗಳಾಗಿರುವ ಸ್ಥಳಗಳಲ್ಲಿ ಸ್ಲೀಪಿಂಗ್ ಸೆಲ್‌ಗಳು ಸಕ್ರಿಯವಾ ಗಿವೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಇದು ಮಾತ್ರವಲ್ಲದೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೋಪುಲರ್ ಫ್ರಂಟ್‌ನ ಸ್ಲೀಪಿಂಗ್ ಸೆಲ್‌ಗಳು ಸಕ್ರಿಯಗೊಂಡಿರು ವುದಾಗಿ ಎನ್‌ಐಎಗೂ ಮಾಹಿತಿ ಲಭಿಸಿದೆ. ಈ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯಕ್ಕೆ ಎನ್‌ಐಎ ತೊಡಗಿದೆ. ಅಂತಹ ಕೇಂದ್ರಗಳಿಗೆ ಶೀಘ್ರದಲ್ಲಿ ದಾಳಿ ನಡೆ ಯಲಿದೆ ಯೆಂದೂ ಹೇಳಲಾಗುತ್ತಿದೆ.
ತೊಡುಪುಳ ನ್ಯೂಮಾನ್ ಕಾಲೇಜಿನ ಪ್ರಾಧ್ಯಾಪಕ ಪ್ರೊ. ಟಿ.ಜೆ. ಜೋಸೆಫ್‌ರ ಕೈ ಕಡಿದು ತುಂಡರಿಸಿದ ಪ್ರಕರಣದಲ್ಲಿ ಒಂದನೇ ಆರೋಪಿ ನಿಷೇಧಿತ ಪೋಪುಲರ್ ಫ್ರಂಟ್ ಕಾರ್ಯಕರ್ತನಾದ ಎರ್ನಾಕುಳಂ ಪೆರುಂಬಾವೂರು ಅಶವನ್ನೂರು ನುಲೇಲಿ ನಿವಾಸಿ ಮುಟ್ಟಶ್ಶೇರಿ ಸವಾದ್ (೩೮) ಎಂಬಾತನನ್ನು ಸೆರೆಹಿಡಿದ ಬೆನ್ನಲ್ಲೇ ರಾಜ್ಯ ಪೊಲೀಸ್ ಗುಪ್ತಚರ ವಿಭಾಗದ ಸ್ಪೆಷಲ್ ಬ್ರಾಂಚ್ ರಾಜ್ಯದಲ್ಲಿ ಪೋಪುಲರ್ ಫ್ರಂಟ್‌ನ ಸ್ಲೀಪಿಂಗ್ ಸೆಲ್‌ಗಳು ಸಕ್ರಿಯಗೊಂಡಿರುವ ಬಗ್ಗೆ ವರದಿ ಯನ್ನು ಹಿರಿಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ. ಸವಾದ್‌ಗೆ ೧೩ ವರ್ಷ ಕಾಲ ತಲೆಮರೆಸಿಕೊಂಡು ಜೀವಿಸಲು ಪೋಪುಲರ್ ಫ್ರಂಟ್‌ನ ಸಹಾಯ ಲಭಿಸಿದೆಯೆಂಬ ಮಾಹಿತಿ ಯೂ ಲಭಿಸಿದೆ. ಅದೇ ರೀತಿ ಸವಾದ್‌ಗೆ ಕೆಲಸ ನಿರ್ವಹಿಸಲು, ಮದುವೆ ಯಾಗಲು ಹಾಗೂ ವಾಸ ಸೌಕರ್ಯಕ್ಕೆ ಸಂಘಟನೆಯ ಸಹಾಯ ಲಭಿಸಿದೆಯೆಂದೂ ತಿಳಿದುಬಂದಿದೆ.
ಇದೇ ವೇಳೆ ಸವಾದ್ ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಬೇರದ ಬಾಡಿಗೆ ಮನೆಯಲ್ಲಿ ಪತ್ತೆಹಚ್ಚಿದ ಎರಡು ಮೊಬೈಲ್ ಫೋನ್‌ಗಳನ್ನು ಎನ್‌ಐಎ ತಪಾಸಣೆ ನಡೆಸಿದ್ದು, ಅದರಲ್ಲಿ ಸವಾದ್‌ಗೆ ತಲೆಮರೆಸಿಕೊಂಡು ವಾಸಿಸಲು ಸಹಾಯವೊದಗಿಸಿ ದವರ ಕುರಿತಾಗಿ ಮಾಹಿತಿ ಲಭಿಸಿದೆಯೆಂದೂ ತಿಳಿದುಬಂದಿದೆ.